ಜೀವನ ರೂಪಿಸುವಲ್ಲಿ ಗುರುಗಳ ಪಾತ್ರ ಪ್ರಮುಖ

Guru Vandana program
ಅಳವಂಡಿ ಸಮೀಪದ ಮತ್ತೂರು ಸಹಿಪ್ರಾ ಶಾಲೆಯಲ್ಲಿ 2003-04ನೇ ಸಾಲಿನ ವಿದ್ಯಾರ್ಥಿಗಳು ಆಯೋಜಿಸಿದ್ದ ಸ್ನೇಹ ಸಮ್ಮೀಲನ ಹಾಗೂ ಗುರುವಂದನೆ ಕಾರ್ಯಕ್ರಮವನ್ನು ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಉದ್ಘಾಟಿಸಿದರು. ಪ್ರಮುಖರಾದ ಅಶೋಕ, ರಾಜಶೇಖರ, ಕಸ್ತೂರಿ, ಮೋತೆಪ್ಪ ಇತರರಿದ್ದರು.
Published on

ಅಳವಂಡಿ: ಜೀವನ ಹಾಗೂ ವ್ಯಕ್ತಿತ್ವ ರೂಪಿಸುವಲ್ಲಿ ಗುರುಗಳ ಪಾತ್ರ ಬಹಳ ಮುಖ್ಯ ಎಂದು ಶ್ರೀ ಮರುಳಾರಾಧ್ಯ ಶಿವಾಚಾರ್ಯರು ತಿಳಿಸಿದರು.

ಸಮೀಪದ ಮತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2003-04ನೇ ಸಾಲಿನ ವಿದ್ಯಾರ್ಥಿಗಳಿಂದ ನಡೆದ ಸ್ನೇಹ ಸಮ್ಮೀಲನ ಹಾಗೂ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು.

ಗುರುಗಳು ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಮಾದರಿ ವ್ಯಕ್ತಿತ್ವ ಹಾಗೂ ಶಿಕ್ಷಣ ನೀಡುತ್ತಾರೆ. ಹೀಗಾಗಿ ಹೆತ್ತ ತಂದೆ ತಾಯಿ ಜತೆಗೆ ಜೀವನದ ದಾರಿ ತೋರಿದ ಗುರುಗಳನ್ನು ಗೌರವಿಸಬೇಕು. ಅಂದಾಗ ಜೀವನ ಸಾರ್ಥಕ ಆಗುತ್ತದೆ ಎಂದರು.

ಹಳೇ ವಿದ್ಯಾರ್ಥಿಗಳು ಹೂಮಳೆ ಗರೆದು ವೇದಿಕೆಗೆ ಶಿಕ್ಷಕರನ್ನು ಸ್ವಾಗತಿಸಿದರು. ನಂತರ ಶಿಕ್ಷಕರನ್ನು ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಅಶೋಕ, ಶಿಕ್ಷಕರಾದ ರಾಜಶೇಖರ, ಕಸ್ತೂರಿ, ಸಂಗಪ್ಪ, ಮಾರುತಿ, ಮೋತೆಪ್ಪ, ಹನುಮಂತಪ್ಪ, ಬಸವರಾಜ, ಗಣೇಶ, ಸಿ.ಬಸವರಾಜ, ಯಮನೂರಸಾಬ, ಅಂಬರೀಶ, ಸುಷ್ಮಾ, ಕರಿಯಮ್ಮ, ಕೃಷ್ಣಮೂರ್ತಿ, ಜಯಶ್ರೀ ಹಾಗೂ ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net