ರೋಗ ಪತ್ತೆಗೆ ಆರೋಗ್ಯ ಶಿಬಿರ ಸಹಕಾರಿ

Alavandi Helth camp
ಅಳವಂಡಿಯಲ್ಲಿ ಆರೋಗ್ಯ ತಪಾಸಣೆ ಉಚಿತ ಶಿಬಿರ ನಡೆಯಿತು. ಡಾ. ಗಾನಶ್ರೀ, ಡಾ.ಸಜ್ಜನ ಹಾಗೂ ಯಶಸ್ವಿನಿ, ಶ್ರೀದೇವಿ, ಪ್ರವೀಣ, ಶಿವರಾಜ, ಸಂಗೀತಾ, ಮೈತ್ರಾ, ರಚಿತಾ ಇದ್ದರು.
Published on

ಅಳವಂಡಿ: ಜನ ಸಾಮಾನ್ಯರಿಗೂ ತಮ್ಮ ಕಾಯಿಲೆಗೆ ಉತ್ತಮ ಚಿಕಿತ್ಸೆ ದೊರೆಯಬೇಕಾದರೆ ಆರೋಗ್ಯ ತಪಾಸಣೆ ಉಚಿತ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು. ಇದರಿಂದ ಆರ್ಥಿಕ ಉಳಿತಾಯ ಆಗಲಿದೆ ಎಂದು ಎಸ್.ಬಿ.ಎಸ್.ಆಯುರ್ವೆದಿಕ್ ಮಹಾ ವಿದ್ಯಾಲಯದ ಡಾ. ಗಾನಶ್ರೀ ತಿಳಿಸಿದರು.

ಗ್ರಾಮದ ಸಿದ್ದೇಶ್ವರ ಸಮುದಾಯ ಭವನದಲ್ಲಿ ಮುಂಡರಗಿಯ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಆಯುರ್ವೆದಿಕ್ ಕಾಲೇಜ ಮತ್ತು ಆಸ್ಪತ್ರೆ, ರಾಷ್ಟ್ರೀಯ ಸೇವಾ ಯೋಜನೆಯಿಂದ ಶನಿವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣೆ ಉಚಿತ ಶಿಬಿರ ಉದ್ದೇಶಿಸಿ ಮಾತನಾಡಿದರು. ನೂರಾರು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಉಚಿತ ಔಷಧ ಪಡೆದರು. ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರ ನಡೆಸುವುದರಿಂದ ಕಾಯಿಲೆಗಳ ಪತ್ತೆ ಮತ್ತು ಚಿಕಿತ್ಸೆ ಸಹಕಾರಿಯಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net