

ಅಳವಂಡಿ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ತರಬೇತಿ ನೀಡಿ ಮುಖ್ಯ ವಾಹಿನಿಗೆ ಕರೆತನ್ನಿ ಎಂದು ಅಳವಂಡಿ ವಲಯದ ಶಿಕ್ಷಣ ಸಂಯೋಜಕ (ಇಸಿಒ) ಮಹಾದೇವಪ್ಪ ಗುಳೇದ ಹೇಳಿದರು.
ಗ್ರಾಮದ ಕೇಂದ್ರೀಯ ಸರ್ಕಾರಿ ಹಿರಿಯ ಹಾಗೂ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಮನ್ವಯಾಧಿಕಾರಿ ಕಚೇರಿ ಕೊಪ್ಪಳದಿಂದ ಹಮ್ಮಿಕೊಂಡಿದ್ದ ಬೆಟಗೇರಿ, ಕವಲೂರು, ಅಳವಂಡಿ, ಹಿರೇಸಿಂದೋಗಿ, ಕೋಳೂರು ಕ್ಲಸ್ಟರ್ ಮಟ್ಟದ ಕಲಿಕೆಯಲ್ಲಿ ಹಿಂದುಳಿದ (ಎಫ್‌ಎಲ್‌ಎನ್) ಮಕ್ಕಳ ಸಮಾಲೋಚನಾ ಹಾಗೂ ತರಬೇತಿ ಸಭೆ ಗುರುವಾರ ಮಾತನಾಡಿದರು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಕನಿಷ್ಠ ಕಲಿಕಾ ಸಾಮರ್ಥ್ಯ ಕಲಿಸುವ ಪ್ರಕ್ರಿಯೆ ಇದಾಗಿದೆ. 3ನೇ ತರಗತಿಯಿಂದ 8ನೇ ತರಗತಿವರೆಗಿನ ಮಕ್ಕಳನ್ನು ಗುರುತಿಸಿ ಕಲಿಕೆಗೆ ಒತ್ತು ನೀಡಿ ಎಂದರು.
ಬಿಆರ್‌ಪಿ ಹನುಮರಡ್ಡಿ, ಬಿಐಇಆರ್‌ಟಿ ಲಕ್ಷ್ಮಣ ಪಲ್ಲೇದ, ಸಿಆರ್‌ಪಿಗಳಾದ ವಿಜಯಕುಮಾರ ಟಿಕಾರೆ, ಬಸವರಾಜ, ದೇವರಡ್ಡಿ, ಇಬ್ರಾಹಿಂ, ಪಕೀರಪ್ಪ, ಮುಖ್ಯ ಶಿಕ್ಷಕರಾದ ಮಾರುತಿ, ನಾರಾಯಣ, ನೌಕರ ಸಂಘದ ನಿರ್ದೇಶಕರಾದ ಬಸವರಾಜ ಜೀರ, ಗುರುಸ್ವಾಮಿ ಹಾಗೂ ಶಿಕ್ಷಕರಿದ್ದರು.