ನೆಚ್ಚಿನ ಶಿಕ್ಷಕಗೆ ಕಣ್ಣೀರ ಬೀಳ್ಕೊಡುಗೆ: ಬೇರೆ ಕಡೆ ಹೋಗದಂತೆ ಬಿಕ್ಕಿಬಿಕ್ಕಿ ಅತ್ತ ವಿದ್ಯಾರ್ಥಿಗಳು

100122 Alvandi Favorite Teacher Farewell Tearful
ಅಳವಂಡಿ ಸಮೀಪದ ನಿಲೋಗಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೀರಯ್ಯ ವರ್ಗಾವಣೆಗೊಂಡ ನಿಮಿತ್ತ ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತಿರುವುದು.
Published on

ಅಳವಂಡಿ: ಶಿಕ್ಷಕರ ವರ್ಗಾವಣೆ ಸಾಮಾನ್ಯ. ಎಲ್ಲೆಡೆಯೂ ನಡೆವ ಪ್ರಕ್ರಿಯೆ. ಆದರೆ, ನಿಲೋಗಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಣಿತ ಮತ್ತು ವಿಜ್ಞಾನ ಶಿಕ್ಷಕ ವೀರಯ್ಯ ಎಚ್. ವರ್ಗಾವಣೆ, ಅವರನ್ನು ಬೀಳ್ಕೊಡುವಾಗ ವಿದ್ಯಾರ್ಥಿಗಳು ಕಣ್ಣೀರಿಟ್ಟ ಪರಿ ಅಪರೂಪ ಎನಿಸುವಂಥದ್ದು.

12 ವರ್ಷಗಳಿಂದ ಗಣಿತ ಮತ್ತು ವಿಜ್ಞಾನ ಪಾಠ ಮಾಡುತ್ತ ಬಂದಿದ್ದ ವೀರಯ್ಯ ಯಲಬುರ್ಗಾ ತಾಲೂಕಿನ ವಟಪರವಿ ಶಾಲೆಗೆ ವರ್ಗಾವಣೆಯಾಗಿದ್ದಾರೆ. ಇದರಿಂದ ಬೇಸರಗೊಂಡ ವಿದ್ಯಾರ್ಥಿಗಳು, ದಯವಿಟ್ಟು ಬೇರೆ ಕಡೆ ಹೋಗಬೇಡಿ ಎಂದು ಗೋಗರೆಯುತ್ತ ಬಿಕ್ಕಿ ಬಿಕ್ಕಿ ಅಳುತ್ತಲೇ ಗುರುವಿನ ಪಾದಕ್ಕೆ ನಮಸ್ಕರಿಸಿ, ಆಶೀರ್ವಾದ ಪಡೆದಿದ್ದಾರೆ. ಮಕ್ಕಳ ಪ್ರೀತಿಯ ಕಂಡ ವೀರಯ್ಯ ಕೂಡ ಭಾವುಕರಾಗಿ, ಇಂತಹ ಪ್ರೀತಿ, ವಿಶ್ವಾಸ ತೋರಿಸಿದ ವಿದ್ಯಾರ್ಥಿಗಳು, ಪಾಲಕರು, ಶಾಲೆ ಮತ್ತು ಊರಿಗೆ ಧನ್ಯವಾದ ತಿಳಿಸಿ, ಮನಸ್ಸಿಲ್ಲದ ಮನಸ್ಸಿನಿಂದ ಊರು ಬಿಟ್ಟು ತೆರಳಿದ್ದಾರೆ. ಈ ದೃಶ್ಯ ನೋಡುಗರ ಕಣ್ಣುಗಳು ಒದ್ದೆಯಾಗುವಂತೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net