ಎರಡು ಕೇಂದ್ರದಲ್ಲಿ ಪರೀಕ್ಷೆ ಸುಗಮ

ALD01
ಅಳವಂಡಿ ಎಸ್‌ಎಸ್‌ಪಿಯು ಕಾಲೇಜಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ಕೊಪ್ಪಳ ಜಿಲ್ಲಾ ಅಕ್ಷರ ದಾಸೋಹದ ಅಧಿಕಾರಿ ಅನಿತಾ ಎಸ್.ಆರ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಪ್ರಮುಖರಾದ ಬಸವರಾಜ, ವೀಣಾ, ಸೊಪ್ಪಿಮಠ, ವೀರಣ್ಣ, ಹನುಮಂತ, ವಿಜಯಕುಮಾರ ಇತರರಿದ್ದರು.
Published on

ಅಳವಂಡಿ: ಗ್ರಾಮದ ಎರಡು ಕೇಂದ್ರದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಶುಕ್ರವಾರ ಸುಗಮವಾಗಿ ನಡೆದವು. ಮುದಕನಗೌಡ ಗಾಳಿ ಬಾಲಕಿಯರ ಪ್ರೌಢಶಾಲೆಯ ಕೇಂದ್ರದಲ್ಲಿ ನೋಂದಾಯಿಸಿಕೊಂಡ ಎಲ್ಲ 217 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು.

ಎಸ್‌ಎಸ್‌ಪಿಯು ಕಾಲೇಜ ಪರೀಕ್ಷಾ ಕೇಂದ್ರದಲ್ಲಿನ ಒಟ್ಟು 302 ವಿದ್ಯಾರ್ಥಿಗಳ ಪೈಕಿ 297 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಐವರು ವಿದ್ಯಾರ್ಥಿಗಳು ಗೈರಾಗಿದ್ದರು.

ಪರೀಕ್ಷಾ ಕೇಂದ್ರಕ್ಕೆ ಕೊಪ್ಪಳ ಜಿಲ್ಲಾ ಅಕ್ಷರ ದಾಸೋಹದ ಅಧಿಕಾರಿ ಅನಿತಾ ಎಸ್.ಆರ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಪಿಎಸ್‌ಐ ಪ್ರಹ್ಲಾದ ನಾಯಕ ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಭದ್ರತೆ ಒದಗಿಸಿದ್ದರು. ತಂಡದ ಬಸವರಾಜ ಪಾಟೀಲ, ವೀಣಾ ದೇಸಾಯಿ, ಸೊಪ್ಪಿಮಠ ಇತರರಿದ್ದರು.

ಮುಖ್ಯ ಅಧಿಕ್ಷಕರಾದ ಯಲ್ಲಪ್ಪ ಬಂಡಿ, ವೀರಣ್ಣ ಮಟ್ಟಿ, ಪ್ರಶ್ನೆ ಪತ್ರಿಕೆ ಪಾಲಕರಾದ ಎಚ್.ಎನ್.ಲಮಾಣಿ, ಅಶೋಕ ಕೊಣ್ಣೂರ, ಸಿಆರ್‌ಪಿ ವಿಜಯಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net