ಕುಡಿವ ನೀರಿನ ಸಮಸ್ಯೆ ನೀಗಿಸಿ: ಜಿಪಂ ಸಿಇಒಗೆ ಬಿಸರಳ್ಳಿ ಗ್ರಾಪಂ ಸದಸ್ಯರ ಮನವಿ

02A LD01
ಕೊಪ್ಪಳದಲ್ಲಿ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯಗೆ ಗ್ರಾಪಂ ಸದಸ್ಯರು, ಮುಖಂಡರು ಮನವಿ ಸಲ್ಲಿಸಿದರು. ಗ್ರಾಪಂ ಅಧ್ಯಕ್ಷ ಮರಿಶಾಂತವೀರಸ್ವಾಮಿ ಚಕ್ಕಡಿಮಠ, ಉಪಾಧ್ಯಕ್ಷೆ ಲಲಿತಾ, ಪ್ರಮುಖರಾದ ರವೀಂದ್ರಗೌಡ ಮಾಲಿಪಾಟೀಲ್, ಪ್ರಕಾಶ ಕೊಪ್ಪದ, ಬಸವರಾಜ ಬಿಕನಹಳ್ಳಿ ಇತರರಿದ್ದರು.
Published on

ಅಳವಂಡಿ: ಬಿಸರಳ್ಳಿ ಗ್ರಾಪಂ ವ್ಯಾಪ್ತಿಯ ಬಿಕನಳ್ಳಿ, ಮೈನಳ್ಳಿ, ಬಿಸರಳ್ಳಿ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಪಂಚಾಯಿತಿ ಸದಸ್ಯರು ಹಾಗೂ ಮುಖಂಡರು ಕೊಪ್ಪಳದಲ್ಲಿ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯಗೆ ಮನವಿ ಸಲ್ಲಿಸಿದರು.

ಬೇಸಿಗೆ ಮುನ್ನವೇ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಗ್ರಾಮಗಳಿಗೆ ತುಂಗಭದ್ರಾ ನದಿಯಿಂದನೀರು ಪೂರೈಸುವ ಪೈಪ್‌ಲೈನ್ ಕಾಮಗಾರಿ ಬೇಳೂರು ಗ್ರಾಮದ ಹತ್ತಿರ ನಾಲ್ಕು ವರ್ಷದಿಂದ ನಡೆಯುತ್ತಿದೆ. ಕಾಮಗಾರಿ ನಿಧಾನಗತಿಯಲ್ಲಿ ನಡೆದಿರುವುದರಿಂದ ನೀರಿನ ಸಮಸ್ಯ ಉಂಟಾಗಿದೆ. ಆದ್ದರಿಂದ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ ಜೀವಜಲ ಸಮಸ್ಯೆ ನೀಗಿಸಬೇಕೆಂದು ಒತ್ತಾಯಿಸಿದರು.

ಗ್ರಾಪಂ ಅಧ್ಯಕ್ಷ ಮರಿಶಾಂತವೀರಸ್ವಾಮಿ ಚಕ್ಕಡಿಮಠ, ಉಪಾಧ್ಯಕ್ಷೆ ಲಲಿತಾ, ಪ್ರಮುಖರಾದ ರವೀಂದ್ರಗೌಡ ಮಾಲಿಪಾಟೀಲ್, ಪ್ರಕಾಶ ಕೊಪ್ಪದ, ಬಸವರಾಜ ಬಿಕನಹಳ್ಳಿ, ಮಲ್ಲಯ್ಯ, ಮುಳ್ಳವ್ವ ಮಠದ, ಸಕ್ರಡ್ಡಿ ಹ್ಯಾಟಿ, ಅನ್ನಪೂರ್ಣ, ಪಾರ್ವತಿ, ವಿಶಾಲಾಕ್ಷಿ, ನೀಲವ್ವ, ಬಸಮ್ಮ, ಸುಶೀಲಮ್ಮ, ಪ್ರಭು, ಗೂಳಪ್ಪ, ನಾಗಪ್ಪ, ಪರಶುರಾಮ, ರಮೇಶರಡ್ಡಿ, ಆನಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net