ತೆರಿಗೆ ಪಾವತಿಯಿಂದ ಅಭಿವೃದ್ಧಿ ಸಾಧ್ಯ

Debt Recovery Campaign
ಅಳವಂಡಿಯಲ್ಲಿ ಗ್ರಾಪಂ ವತಿಯಿಂದ ಕರ ವಸೂಲಿ ಅಭಿಯಾನ ನಡೆಯಿತು. ಪ್ರಮುಖರಾದ ಯಂಕಪ್ಪ, ದೇವರಾಜ, ಕೊಟ್ರಪ್ಪ, ಬಸವರಾಜ, ಶಿವಮೂರ್ತಿ, ದೇವೇಂದ್ರರಡ್ಡಿ, ಸುರೇಶ ಇತರರಿದ್ದರು.
Published on

ಅಳವಂಡಿ: ಗ್ರಾಮಸ್ಥರು ಸಕಾಲಕ್ಕೆ ಗ್ರಾಪಂಗೆ ಕರ ಪಾವತಿಸಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಸಹರಿಸಬೇಕು ಎಂದು ತಾಪಂ ನರೇಗಾ ಎಡಿಎ ಯಂಕಪ್ಪ ತಿಳಿಸಿದರು.

ಗ್ರಾಮದಲ್ಲಿ ಜಿಪಂ, ತಾಪಂ ಹಾಗೂ ಅಳವಂಡಿ ಗ್ರಾಪಂನಿಂದ ಗುರುವಾರ ಹಮ್ಮಿಕೊಂಡಿದ್ದ ಕರ ವಸೂಲಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಸಕಾಲಕ್ಕೆ ತೆರಿಗೆ ಪಾವತಿಸುವುದು ನಾಗರಿಕರ ಆದ್ಯ ಕರ್ತವ್ಯ. ಈ ಕಾರ್ಯ ಸರಾಗ ಆದರೆ ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಮುಖಂಡರು ಗ್ರಾಮದಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ತಾಪಂ ನರೇಗಾ ಐಇಸಿ ಕೋಆರ್ಡಿನೇಟರ್ ದೇವರಾಜ ಪತ್ತಾರ, ಪಿಡಿಒ ಕೊಟ್ರಪ್ಪ ಅಂಗಡಿ, ಕಾರ್ಯದರ್ಶಿ ಬಸವರಾಜ, ಗ್ರಾಪಂ ಸಿಬ್ಬಂದಿ ಶಿವಮೂರ್ತಿ, ದೇವೇಂದ್ರರಡ್ಡಿ, ಸುರೇಶ, ಹನುಮಂತ, ಏಕಯ್ಯ, ದಾವಲಸಾಬ, ಮಹಿಳಾ ಸಂಘದ ಕಾವೇರಿ, ಪ್ರತಿಭಾ, ಯಲ್ಲಮ್ಮ, ಕಾಳಮ್ಮ, ಪ್ರಮುಖರಾದ ವಸಂತ ನಾಗರಳ್ಳಿ, ಶಿವಣ್ಣ ಮೇಟಿ, ಜಾವೇದ ಆದೋನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net