

ಅಳವಂಡಿ: ಯುವಕರು ಸೋಲು-ಗೆಲುವನ್ನು ಲೆಕ್ಕಿಸದೆ ಕ್ರೀಡಾ ಮನೋಭಾವದಿಂದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಗತಿಪರ ಕೃಷಿಕ ಅಜಯಗೌಡ ಪಾಟೀಲ ತಿಳಿಸಿದರು.
ಗ್ರಾಮದ ಸಿದ್ದೇಶ್ವರ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಅಳವಂಡಿ ಕ್ರಿಕೆಟ್ ಪ್ರೀಪಿಯರ್ ಲೀಗ್ (ಎಪಿಎಲ್) ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಭಾನುವಾರ ಮಾತನಾಡಿದರು. ಯುವಕರು ಮೊಬೈಲ್ ಅಗತ್ಯಕ್ಕಷ್ಟೇ ಬಳಸಬೇಕು. ಕ್ರೀಡೆಯಲ್ಲಿ ತೊಡಗಿಕೊಂಡು ದೇಹ ಮತ್ತು ಮನಸನ್ನು ಸದೃಢವಾಗಿಟ್ಟುಕೊಳ್ಳಬೇಕು ಎಂದರು.
ಗ್ರಾಪಂ ಸದಸ್ಯ ಗುರುಬಸವರಾಜ ಹಳ್ಳಿಕೇರಿ ಮಾತನಾಡಿ, ಯುವಕರು ಓದಿನ ಜತೆಗೆ ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಪ್ರಥಮ ಸ್ಥಾನ ಪಡೆದ ವಿಕ್ಟರಿ ವೈಪರ್ಸ್ ತಂಡಕ್ಕೆ 50 ಸಾವಿರ ರೂ. ಬಹುಮಾನ ಮತ್ತು ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಡೆವಿಲ್ ಕಿಂಗ್ಸ್‌ಗೆ 30 ಸಾವಿರ ರೂ. ಮತ್ತು ಟ್ರೋಫಿ, ತೃತೀಯ ಸ್ಥಾನ ಪಡೆದ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ 20 ಸಾವಿರ ರೂ. ಬಹುಮಾನ ಮತ್ತು ಟ್ರೋಫಿ ವಿತರಿಸಲಾಯಿತು.
ಪ್ರಮುಖರಾದ ಗಣೇಶ ಹೊರತಟ್ನಾಳ, ಅನ್ವರ ಹುಸೇನ ಗಡಾದ, ಪ್ರಕಾಶ ಸ್ವಾಮಿ ಇನಾಮದಾರ, ಶ್ರೀನಿವಾಸ ಕಲಾದಗಿ, ಸತೀಶ ಜಾಣಗಾರ, ವೆಂಕಟೇಶ ತವದಿ, ಆನಂದ, ದಾದು, ನಜೀರ್, ಅಣ್ಣಪ್ಪ, ಮಂಜಪ್ಪ, ವಿರೂಪಾಕ್ಷ, ಮಲ್ಲಪ್ಪ, ಪರಪ್ಪ, ರೇಣುಕಪ್ಪ, ಆನಂದ, ಉಮೇಶ ಗೌಡ್ರ, ಸೋಮಣ್ಣ, ಚನ್ನಪ್ಪ, ಹನುಮಂತ, ತೋಟಯ್ಯ, ವಿಶ್ವನಾಥ ಇತರರಿದ್ದರು.