

ಅಳವಂಡಿ: ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಆಲೋಚನಾ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ಶಿಕ್ಷಣ ಸಂಯೋಜಕ ಮಹದೇವಪ್ಪ ಗುಳೇದ ತಿಳಿಸಿದರು.
ಸಮೀಪದ ಬೋಚನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಸೋಮವಾರ ಆಯೋಜಿಸಿದ್ದ ಅಳವಂಡಿ ಕ್ಲಸ್ಟರ್ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಒತ್ತಡ, ಆತಂಕ, ಖಿನ್ನತೆ ಪ್ರಮಾಣ ಕಡಿಮೆಯಾಗಲಿದೆ. ಸಕಾರಾತ್ಮಕ ಮನೋಭಾವ ಹೆಚ್ಚಿಸಿ ಜೀವನದಲ್ಲಿ ಶಿಸ್ತು, ತಾಳ್ಮೆ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸಲಿದೆ. ಆರೋಗ್ಯ ಉತ್ತಮವಾಗಿರಲು ಮಕ್ಕಳು ಸೋಲು-ಗೆಲುವನ್ನು ಲೆಕ್ಕಿಸದೆ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದರು.
ಇದಕ್ಕೂ ಮೊದಲು ಕ್ರೀಡಾ ಜ್ಯೋತಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಕ್ರೀಡಾ ಮೈದಾನಕ್ಕೆ ತರಲಾಯಿತು. ನಂತರ ಕ್ರೀಡಾಪಟುಗಳು ಕ್ರೀಡಾ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಸಿಆರ್‌ಪಿ ವಿಜಯಕುಮಾರ ಟಿಕಾರೆ, ಮುಖ್ಯಶಿಕ್ಷಕ ದೇವಪ್ಪ ಬಚಕ್ಕನವರ, ಪ್ರಮುಖರಾದ ಪರಸಪ್ಪ, ಶಂಕರ, ನಿಂಗಜ್ಜ, ಭೀಮೇಶಪ್ಪ, ಅಂದಪ್ಪ, ಯಂಕಪ್ಪ, ಭರಮಪ್ಪ, ಬಸನಗೌಡ, ಗೋಣೇಶ, ಹನುಮೇಶ, ಆನಂದ, ನಾಗನಗೌಡ, ಶರಣಬಸವ, ಕೋಟೆಪ್ಪ, ವಿರೂಪಾಕ್ಷಪ್ಪ, ಹನುಮೇಶ, ನಿಂಗಜ್ಜ, ಅಂದಯ್ಯ, ಜಗದೀಶ ಇತರರಿದ್ದರು.