ಏಳಿಗೆಗೆ ಪುರಾಣ ಪ್ರವಚನಗಳು ಪೂರಕ

ald-1
ಬಿಸರಳ್ಳಿಯಲ್ಲಿ ಶ್ರೀ ಗವಿಸಿದ್ಧೇಶ್ವರ ಪುರಾಣ ಪ್ರವಚನ ಮಂಗಲ ಕಾರ್ಯಕ್ರಮದ ಮೆರವಣಿಗೆಗೆ ಶ್ರೀ ಹಿರೇಶಾಂತವಿರ ಸ್ವಾಮೀಜಿ ಚಾಲನೆ ನೀಡಿದರು. ಪುರಾಣ ಪ್ರವಚನಗಾರ್ತಿ ಎಸ್. ಅಕ್ಕಮಹಾದೇವಿ, ಗ್ರಾಪಂ ಅಧ್ಯಕ್ಷ ಮಲ್ಲಯ್ಯ ಮಠದ, ಪ್ರಮುಖರಾದ ರಮೇಶರೆಡ್ಡಿ ಮೂಲಿಮನಿ, ನಾಗಪ್ಪ ಬಿಕನಹಳ್ಳಿ, ವೀರಣ್ಣ ಕೋನಸಾಗರ, ಅಂದಯ್ಯ, ಚನ್ನಬಸನಗೌಡ ಸಿಂದೋಗಿ, ಮಹೇಂದ್ರಗೌಡ, ರುದ್ರಪ್ಪ, ಯಂಕಪ್ಪ, ಅಂದಯ್ಯ ಇತರರಿದ್ದರು.
Published on

ಅಳವಂಡಿ: ಸಂಸ್ಕಾರ ಮತ್ತು ನೆಮ್ಮದಿಗಾಗಿ ಪುರಾಣ ಪ್ರವಚನ ಆಲಿಸಬೇಕು ಎಂದು ಹೂವಿನಹಡಗಲಿಯ ಶ್ರೀ ಹಿರೇಶಾಂತವೀರ ಸ್ವಾಮೀಜಿ ಹೇಳಿದರು.

ಸಮೀಪದ ಬಿಸರಳ್ಳಿ ಗ್ರಾಮದ ಶ್ರೀ ಗವಿಸಿದ್ಧೇಶ್ವರ ಶಾಖಾ ಮಠದಲ್ಲಿ ಲಿಂ.ಜ.ಶ್ರೀ ಶಿವ ಶಾಂತವೀರ ಹಾಗೂ ಮರಿ ಶಾಂತವೀರ ಶಿವಯೋಗಿಗಳ ಪುಣ್ಯಸ್ಮರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ಗವಿಸಿದ್ಧೇಶ್ವರ ಪುರಾಣ ಪ್ರವಚನ ಮಂಗಲ ಕಾರ್ಯಕ್ರಮದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಪುರಾಣ ಪ್ರವಚನ ಆಲಿಸುವುದರಿಂದ ಒಳ್ಳೆಯ ವಿಚಾರಗಳು ಮೂಡುತ್ತವೆ. ಭಗವಂತನ, ಶರಣರ, ಮಹಾತ್ಮರ ಜೀವನ ಚರಿತ್ರೆಗಳನ್ನು ಕೇಳುವುದರಿಂದ ವ್ಯಕ್ತಿತ್ವ ಉನ್ನತಿಗೊಳ್ಳುತ್ತದೆ. ಜತೆಗೆ ಗುರುಗಳ ಮಾರ್ಗದರ್ಶನದೊಂದಿಗೆ ಪ್ರಾಮಾಣಿಕತೆ, ಸಂಸ್ಕಾರ, ಶಿಸ್ತು ಬೆಳೆಸಿಕೊಳ್ಳಬೇಕು.

ಇವು ಜೀವನದ ಏಳಿಗೆಗೆ ಸಹಕಾರಿಯಾಗಲಿವೆ. ಸಮಾಜದಲ್ಲಿ ಹೊಂದಿಕೊಂಡು ಹೋಗುವ ಗುಣ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಗ್ರಾಮದ ಶ್ರೀ ಮರುಳಸಿದ್ದೇಶ್ವರ ದೇವಸ್ಥಾನದಿಂದ ಮಹಿಳೆಯರ ಕಳಸ-ಕುಂಭ, ವಾದ್ಯ ಮೇಳದೊಂದಿಗೆ ಆರಂಭಗೊಂಡ ಶ್ರೀ ಗವಿಸಿದ್ಧೇಶ್ವರ ಭಾವಚಿತ್ರ ಮೆರವಣಿಗೆಯು ಮಠದವರೆಗೆ ಸಾಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net