

ಅಳವಂಡಿ: ಪುರಾಣ-ಪ್ರವಚನಗಳ ಕೇಳಿಸಿಕೊಳ್ಳುವುದರಿಂದ ಮನುಷ್ಯನಲ್ಲಿನ ದುರ್ಗುಣಗಳು ದೂರ ಆಗುತ್ತವೆ ಎಂದು ಹೂವಿನಹಡಗಲಿಯ ಡಾ.ಹಿರೇಶಾಂತವೀರ ಸ್ವಾಮೀಜಿ ತಿಳಿಸಿದರು.
ಸಮೀಪದ ಬಿಸರಳ್ಳಿ ಗ್ರಾಮದ ಶ್ರೀ ಗವಿಸಿದ್ಧೇಶ್ವರ ಶಾಖಾಮಠದಲ್ಲಿ ಲಿಂ.ಜ.ಶಿವಶಾಂತವೀರ ಹಾಗೂ ಮರಿಶಾಂತವೀರ ಮಹಾಶಿವಯೋಗಿಗಳ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಧಾರ್ಮಿಕ ಸಭೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೀವನದಲ್ಲಿ ತಪ್ಪುಗಳಾಗುವುದು ಸಹಜ. ಅವುಗಳನ್ನು ತಿದ್ದಿಕೊಂಡು ಜೀವಿಸಬೇಕು. ಆ ತಪ್ಪುಗಳನ್ನು ತಿದ್ದಿಕೊಳ್ಳಲು ಪುರಾಣ ಪ್ರವಚನದ ನೀತಿ ಪಾಠಗಳು ಹಾಗೂ ಗುರುವಿನ ಮಾರ್ಗದರ್ಶನ ಪೂರಕ ಎಂದರು.
ಪುರಾಣ ಪ್ರವಚನಗಾರ್ತಿ ಎಸ್.ಅಕ್ಕಮಹಾದೇವಿ, ಎಸ್.ಉಮಾಪತಿ ಶಾಸ್ತ್ರೀ, ಕಳಕಯ್ಯಸ್ವಾಮಿ, ಗ್ರಾಪಂ ಅಧ್ಯಕ್ಷ ಮಲ್ಲಯ್ಯ ಮಠದ, ಪ್ರಮುಖರಾದ ಸರ್ವಮಂಗಳ ಹಲಗೇರಿ, ರಮೇಶರೆಡ್ಡಿ ಮೂಲಿಮನಿ, ನಾಗಪ್ಪ ಬಿಕನಹಳ್ಳಿ, ವೀರಣ್ಣ ಕೋನಸಾಗರ, ಅಂದಯ್ಯ, ಚನ್ನಬಸನಗೌಡ ಸಿಂದೋಗಿ, ಮಹೇಂದ್ರಗೌಡ, ರುದ್ರಪ್ಪ, ಯಂಕಪ್ಪ, ಅಂದಯ್ಯ ಇತರರಿದ್ದರು.