ದೂರದೃಷ್ಟಿ-ವ್ಯಾಪಾರ ಅಭಿವೃದ್ದಿ ತರಬೇತಿ ಶಿಬಿರ

Untitled design (38)
ಭೈರಾಪುರ ಗ್ರಾಮದಲ್ಲಿ ಪ್ರಕೃತಿ ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ ದೂರದೃಷ್ಟಿ ಹಾಗೂ ವ್ಯಾಪಾರ ಅಭಿವೃದ್ಧಿ ತರಬೇತಿ ಶಿಬಿರ ನಡೆಯಿತು. ಸಂಪನ್ಮೂಲ ವ್ಯಕ್ತಿ ಪದ್ಮಾ ಕಾತರಕಿ, ಪ್ರಮುಖರಾದ ಸರೋಜಾ, ಚನ್ನಮ್ಮ, ವನಜಾಕ್ಷಿ, ಭುವನೇಶ್ವರಿ, ವಿಜಯಲಕ್ಷ್ಮೀ ಇತರರಿದ್ದರು.
Published on

​ಅಳವಂಡಿ: ಭೈರಾಪುರ ಗ್ರಾಮದ ಶ್ರೀರಾಮ ಮಂದಿರದಲ್ಲಿ ಜಿಪಂ ಕೊಪ್ಪಳ, ತಾಪಂ ಕೊಪ್ಪಳ, ಗ್ರಾಮ ಪಂಚಾಯಿತಿ ಬೋಚನಹಳ್ಳಿ ಜಂಟಿಯಾಗಿ ಪ್ರಕೃತಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಮಹಿಳೆಯರಿಗೆ ದೂರದೃಷ್ಟಿ ಹಾಗೂ ವ್ಯಾಪಾರ ಅಭಿವೃದ್ದಿ ತರಬೇತಿ ಶಿಬಿರ ಸೋಮವಾರ ಹಮ್ಮಿಕೊಳ್ಳಲಾಗಿತ್ತು.

ಸಂಪನ್ಮೂಲ ವ್ಯಕ್ತಿ ಪದ್ಮಾ ಕಾತರಕಿ ಅವರು ಮಹಿಳೆಯರಿಗೆ ಆರೋಗ್ಯ, ಮೂಲ ಸೌಕರ್ಯ, ಸ್ವಚ್ಛ ಪರಿಸರ, ಶಿಕ್ಷಣ, ಪರಿಸರ ಕೃಷಿ, ವ್ಯಾಪಾರ ಅಭಿವೃದ್ಧಿ, ಮಹಿಳಾ ಸಬಲೀಕರಣ, ಗ್ರಾಮಾಭಿವೃದ್ದಿ ಹೊಂದುವ ಅನೇಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಒಕ್ಕೂಟದ ಅಧ್ಯಕ್ಷೆ ಸರೋಜಾ ಕಲ್ಲಳ್ಳಿ, ಉಪಾಧ್ಯಕ್ಷೆ ಚನ್ನಮ್ಮ, ಎಂಬಿಕೆ ವನಜಾಕ್ಷಿ ಸಸಿಮಠ, ಎಲ್‌ಸಿಆರ್‌ಪಿ ಭುವನೇಶ್ವರಿ, ವಿಜಯಲಕ್ಷ್ಮೀ, ಕೃಷಿ ಸಖಿ ರತ್ನಾ, ಪಶು ಸಖಿ ಸಾವಿತ್ರಿ, ರೇಖಾ ಹಾಗೂ ಸ್ವ ಸಹಾಯ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net