ಭೈರಾಪುರ ದೇವತೆಗಳ ಜಾತ್ರೆ ಅದ್ದೂರಿ

Untitled design(13)
Published on

ಅಳವಂಡಿ: ಸಮೀಪದ ಭೈರಾಪುರ ಗ್ರಾಮದ ಆರಾದ್ಯ ದೇವತೆಗಳಾದ ಶ್ರೀದುರ್ಗಾದೇವಿ ಹಾಗೂ ತಾಯಮ್ಮದೇವಿ ಜಾತ್ರೋತ್ಸವ ನಿಮಿತ್ತ ಮೆರವಣಿಗೆ ಹಾಗೂ ಗಂಗಾಪೂಜೆ ಬುಧವಾರ ಜರುಗಿತು.

ಬೆಳಗ್ಗೆ ಶ್ರೀದುರ್ಗಾದೇವಿ, ತಾಯಮ್ಮ ದೇವಿಗೆ ವಿಶೇಷ ಪೂಜೆ, ಅಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ನಂತರ ಮಹಿಳೆಯ ಕಳಶ, ಬಾಜಾ ಭಜಂತ್ರಿ, ನಂದಿಕೋಲು ಹಾಗೂ ಮೋರನಾಳ ಗ್ರಾಮದ ಡೊಳ್ಳು ವಾದ್ಯ ಮೇಳದೊಂದಿಗೆ ಗಂಗಾಸ್ಥಳಕ್ಕೆ ತೆರಳಿ ಗಂಗಾಪೂಜೆ ನೆರವೇರಿತು. ಭಕ್ತರು ದೀರ್ಘದಂಡ ನಮಸ್ಕಾರದೊಂದಿಗೆ ಹರಕೆ ಸಲ್ಲಿಸಿದರು. ದೇವಿಯರ ಮೆರವಣಿಗೆ ಶ್ರೀರಾಮ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ಶ್ರೀದುರ್ಗಾದೇವಿ, ಶ್ರೀತಾಯಮ್ಮದೇವಿ ದೇವಸ್ಥಾನದವರೆಗೂ ನಡೆಯಿತು. ಭಕ್ತರು ದೇವತೆಗಳಿಗೆ ಉಡಿ ತುಂಬಿದರು. ಬಳಿಕ ಅನ್ನಸಂತರ್ಪಣೆ ನಡೆಯಿತು.

ಪ್ರಮುಖರಾದ ಮೈಲಾರಪ್ಪ ಮೇಟಿ, ವೆಂಕಟೇಶ, ಗಂಗಪ್ಪ, ಮಹೇಶಪ್ಪ, ಕಾಶಯ್ಯ, ಬಸವರಡ್ಡಿ ರಡ್ಡೇರ, ದೇವರೆಡ್ಡಿ, ಯಲ್ಲಪ್ಪ, ಹನುಮಪ್ಪ, ಹನುಮಂತಪ್ಪ, ಗಿಡ್ಡಪ್ಪ, ನಿಂಗಪ್ಪ ಮೆಟಿ, ಪರಶುರಾಮ, ಬಸವರಾಜ, ಶರಣಪ್ಪ, ಗಂಗಪ್ಪ, ಲಕ್ಷ್ಮಣ, ವೀರಯ್ಯ ಸಿಂದೋಗಿ, ವೆಂಕಟೇಶ ಬ್ಯಾಡಗಿ, ಗಂಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net