ವಿಷಯವನ್ನು ಸರಿಯಾಗಿ ಮನನ ಮಾಡಿಕೊಳ್ಳಿ

Untitled design
Published on

ಅಳವಂಡಿ: ಸಮೀಪದ ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಶಂಕ್ರಯ್ಯ ಶುಕ್ರವಾರ ಭೇಟಿ ನೀಡಿ, ಶಾಲಾ ಹಂತದ ಎಸ್‌ಎಸ್‌ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆ ವೀಕ್ಷಿಸಿದರು.

ಮಕ್ಕಳಿಗೆ ಪರೀಕ್ಷೆಯ ಬಗ್ಗೆ ಭಯ ಬೇಡ. ಚೆನ್ನಾಗಿ ಅಭ್ಯಾಸ ಮಾಡಿ ವಿಷಯವನ್ನು ಮೇಲಿಂದ ಮೇಲೆ ಬರೆದು ಮನನ ಮಾಡಿಕೊಳ್ಳಬೇಕು. ಇದರಿಂದ ಉತ್ತೀರ್ಣ ರಾಗುವುದರ ಜತೆಗೆ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಬಿಇಒ ಟಿ.ಎಸ್. ಶಂಕ್ರಯ್ಯ ಹೇಳಿದರು.

ಶಿಕ್ಷಕರಾದ ಪ್ರಕಾಶ ರೆಡ್ಡಿ, ರವಿಕಿರಣ ಟಿಕಾರೆ, ಗಿರಿಯಪ್ಪ ಹಾರನಹಳ್ಳಿ, ಮರ್ದಾನಲಿ ಗಡಾದ, ರಾಜಸಾಬ ಬಳಗೇರಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net