

ಅಳವಂಡಿ: ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡಬಾರದು. ಅವರಿಗೆ ಶಿಕ್ಷಣದ ಆಸ್ತಿಯನ್ನು ನೀಡಿದಾಗ ಜೀವನಮಟ್ಟ ಸುಧಾರಿಸಲು ಸಾಧ್ಯ ಎಂದು ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ನಾಗರಡ್ಡಿ ತಿಳಿಸಿದರು.
ಸಮೀಪದ ಬೆಟಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಟಾಟಾ ಟ್ರಸ್ಟ್ ದಾಖಲಾತಿ ಆಂದೋಲನದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತವಾಗಬಾರದೆಂದು ಸರ್ಕಾರ ಕಡ್ಡಾಯ ಶಿಕ್ಷಣ ನೀತಿ ಜಾರಿಗೊಳಿಸಿದೆ. ಕಾರಣ ಮಕ್ಕಳನ್ನು ಪಾಲಕರು ತಪ್ಪದೆ ಶಾಲೆಗೆ ಕಳುಹಿಸಿಸಬೇಕು ಎಂದರು. ಮುಖ್ಯ ಶಿಕ್ಷಕಿ ಕಸ್ತೂರಿ ಬಡಿಗೇರ ಮಾತನಾಡಿದರು.
ವಿದ್ಯಾರ್ಥಿಗಳು ವಿವಿಧ ಛದ್ಮವೇಷ ಧರಿಸಿ ಶಿಕ್ಷಣದ ಭಿತ್ತಿಪತ್ರಗಳನ್ನು ಹಿಡಿದು ಡೊಳ್ಳಿನ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು. ಸಿಆರ್‌ಪಿ ಬಸವರಾಜ, ಮುಖ್ಯ ಶಿಕ್ಷಕ ಪರಶುರಾಮ ಸಾಲ್ಮನಿ, ಕಲಿಕೆ ಟಾಟಾ ಟ್ರಸ್ಟ್‌ನ ಸಂಯೋಜಕರಾದ ಆಂಜನೇಯ, ಸುರೇಶ, ಎಸ್ಡಿಎಂಸಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮದ ಮುಖಂಡರು ಇದ್ದರು.