ಬೆಳಗಟ್ಟಿ ಮಲ್ಲಾಡಪೀರ ಉರುಸು ಅದ್ದೂರಿ

Untitled design (5)
Published on

ಅಳವಂಡಿ: ಸಮೀಪದ ಬೆಳಗಟ್ಟಿ ಗ್ರಾಮದ ಶ್ರೀ ಹಜರತ್ ಸೈಯದ್ ಶಾಹ ಮುಸ್ತಪಾ ಖಾದ್ರಿ ಷರೀಪ ಅವರ ಮೊಮ್ಮಕ್ಕಳಾದ ಶ್ರೀ ಗುರು ಹಜರತ್ ಮೆಹಬೂಬ ಪೀರಾ ಖಾದ್ರಿ ಉರ್ಪ ಮಲ್ಲಾಡ ಪೀರನವರ ಉರುಸು ಮಂಗಳವಾರ ಅದ್ದೂರಿಯಿಂದ ಜರುಗಿತು.

ಸಂಜೆ ಮಹಾತ್ಮರ ಗಂಧವು ಹಜರತ್ ಮುಸ್ತಪಾ ಖಾದ್ರಿ ತಾಷೆವಾಲಾ ಅವರ ತಾಷಾ ವಾದ್ಯ ಹಾಗೂ ವಾದ್ಯಮೇಳದೊಂದಿಗೆ ದರ್ಗಾದಿಂದ ಆರಂಭವಾಗಿ ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಮಸೀದಿ ನಂತರ ಗಂಧವು ಸೈಯದ್‌ಶಾ ಮುಸ್ತಫಾ ಖಾದ್ರಿ ದರ್ಗಾಕ್ಕೆ ತಲುಪಿತು. ನಂತರ ಮಹಾತ್ಮರ ಪಾತೇಹಾ ಕಾರ್ಯಕ್ರಮ ನಡೆಯಿತು. ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ಧರ್ಮಗುರುಗಳಾದ ಸೈಯದ್‌ಶಾ ಮೆಹಬೂಬ ಖಾದ್ರಿ, ಸೈಯದ್‌ಶಾ ಮುಸ್ತಪಾ ಖಾದ್ರಿ, ಪ್ರಮುಖರಾದ ಹೊನ್ನಪ್ಪಗೌಡ ಪಾಟೀಲ, ವಿಷ್ಣು ಹಾಳಕೇರಿ, ಮೋದಿನಸಾಬ್ ಆಲೂರು, ಜಂಗ್ಲಿಸಾಬ ಒಂಟಿ, ಖಾದರಸಾಬ್ ಆಲೂರು, ಮುಸ್ತುಸಾಬ ಕೆಂಪಸಾಬಣ್ಣವರ, ಕನಕನಗೌಡ, ಶಿವನಗೌಡ, ಗುಡದಪ್ಪ, ಖಾಜಾಸಾಬ, ಕರೀಮಸಾಬ್, ಮುರ್ತುಜಾಸಾಬ್, ಮೆಹಬೂಬಸಾಬ್, ತಾಜುದ್ದೀನ್, ಮುಸ್ತುಇಸಾಬ್, ಶಪಿಸಾಬ್, ಮುರ್ತುಜಾ, ಖಾಜಾಸಾಬ್, ರಮಜಾನಸಾಬ್, ನಿಂಗಪ್ಪ ಚಿಲವಾಡಗಿ, ಮೈನು, ದಾವಲಸಾಬ್, ದೇವಪ್ಪ, ಬಸನಗೌಡ, ನಿಂಗಪ್ಪ, ಖಾದರಸಾಬ್, ಇಮಾಮಸಾಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net