ಕೊರತೆಯಾಗದಂತೆ ಬೀಜಗಳ ಮಾರಾಟ

BITTANE BEEJA
ಅಳವಂಡಿ ರೈತ ಸಂಪರ್ಕ ಕೇಂದ್ರದಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ಮಾರಾಟಕ್ಕೆ ಎಒ ಪ್ರತಾಪಗೌಡ ಚಾಲನೆ ನೀಡಿದರು. ಪ್ರಮುಖರಾದ ಕುಶಾಲ, ಶಂಕರಪ್ಪ, ಸಿದ್ದು, ಶ್ರೀಕಾಂತ, ವಿಶ್ವನಾಥ, ಸಂತೋಷ, ಹನುಮಂತ, ರೇಣವ್ವ ಇತರರಿದ್ದರು.
Published on

ಅಳವಂಡಿ: ಪ್ರಸಕ್ತ ವರ್ಷದ ಹಿಂಗಾರು ಹಂಗಾಮಿನಲ್ಲಿ ರೈತರಿಗೆ ಬಿತ್ತನೆ ಬೀಜಗಳನ್ನು ಗ್ರಾಮದ ರೈತ ಸಂಪರ್ಕ ಕೇಂದ್ರ ಹಾಗೂ ಹಿರೇಸಿಂದೋಗಿಯ ಬೀಜ ಮಾರಾಟದ ಉಪ ಕೇಂದ್ರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಕೃಷಿ ಅಧಿಕಾರಿ ಪ್ರತಾಪಗೌಡ ನಂದನಗೌಡ ತಿಳಿಸಿದರು.

ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರದಿಂದ ಹಿಂಗಾರು ಹಂಗಾಮಿನ ಬೀಜ ಮಾರಾಟಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. ರೈತರಿಗೆ ಕೊರತೆಯಾಗದಂತೆ ಬಿತ್ತನೆ ಬೀಜಗಳನ್ನು ಪೂರೈಸಲಾಗುವುದು. ಸದ್ಯ ಬಿಳಿಜೋಳ, ಕಡಲೆ ಬೀಜಗಳ ಮಾರಾಟ ಮಾಡಲಾಗುವುದು. ಕಡಲೆ ಬೀಜ 925 ಕ್ವಿಂಟಾಲ್, ಬಿಳಿಜೋಳ 10.80 ಕ್ವಿಂಟಾಲ್ ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿದೆ.

ಕಡಲೆ ಸಾಮಾನ್ಯ ರೈತರಿಗೆ 20 ಕೆಜಿ ಚೀಲಕ್ಕೆ 1970 ದರ ಇದ್ದು, ಸಹಾಯಧನ 500 ರೂ. ಕಳೆದು 1470 ರೂ.ಗೆ ಸಿಗಲಿದೆ. ಎಸ್‌ಸಿ, ಎಸ್‌ಟಿ ರೈತರಿಗೆ 20 ಕೆಜಿ ಚೀಲಕ್ಕೆ 1970 ರೂ. ಇದ್ದು ಸಹಾಯಧನ 750 ರೂ. ಕಳೆದು 1250 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಜೋಳ ಸಾಮಾನ್ಯ ರೈತರಿಗೆ ಮೂರು ಕೆಜಿ ಚೀಲಕ್ಕೆ ಸಹಾಯಧನ ಕಳೆದು 169-50 ರೂ. ಇದೆ. ಎಸ್‌ಸಿ, ಎಸ್‌ಟಿ ವರ್ಗಕ್ಕೆ 139-50 ರೂ. ದರಕ್ಕೆ ಲಭಿಸಲಿದೆ. ಇವುಗಳನ್ನು ಪಡೆಯಲು ದಾಖಲೆಗಳು ಅಗತ್ಯ ಎಂದರು.

ಪ್ರಮುಖರಾದ ಕುಶಾಲ ರಾಜಪುರೋಹಿತ, ಶಂಕ್ರಪ್ಪ ಮೇಟಿ, ಸಿದ್ದು ಪೂಜಾರ, ಶ್ರೀಕಾಂತ ಹೈತಾಪುರ, ವಿಶ್ವನಾಥ ಕಿಲ್ಲೇದ, ಸಂತೋಷ ಹಂಚಿನಾಳ, ಹನುಮಂತ ಕೊರ್ಲಗಟ್ಟಿ, ರೇಣವ್ವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net