ಶ್ರದ್ಧೆ, ಸ್ವಚ್ಛ ಮನಸಿನ ಭಕ್ತಿ ನಿಮ್ಮದಾಗಿರಲಿ

Devi Jatrotsava
ಅಳವಂಡಿ ಸಮೀಪದ ಮೈನಹಳ್ಳಿಯಲ್ಲಿ ಶ್ರೀ ಬುಡ್ಡಮ್ಮದೇವಿ ರಥೋತ್ಸವ ಅದ್ದೂರಿಯಾಗಿ ಜರುಗಿತು.
Published on

ಅಳವಂಡಿ: ಬುಡ್ಡಮ್ಮ ದೇವಿ ಎಲ್ಲರ ಮನಸ್ಸು ಹಾಗೂ ಹೃದಯದೊಳಗೆ ನೆಲೆಸಿದ್ದಾಳೆ ಎಂದು ಕೊಪ್ಪಳದ ಅಭಿನವ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಸಮೀಪದ ಮೈನಹಳ್ಳಿ ಗ್ರಾಮದ ಆರಾಧ್ಯ ದೇವತೆ ಶಿವಶರಣೆ ಬುಡ್ಡಮ್ಮ ದೇವಿ ಜಾತ್ರೋತ್ಸವದ ನಿಮಿತ್ತ ಗುರುವಾರ ಸಂಜೆ ಆಯೋಜಿಸಿದ್ದ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ನಿಮ್ಮ ಭಕ್ತಿ, ಶ್ರದ್ಧೆ, ಸ್ವಚ್ಛ ಮನಸಿನಿಂದ ಕೂಡಿದೆ. ನಿಮ್ಮ ಭಕ್ತಿ ಹೀಗೆಯೆ ಮುಂದುವರೆಯಲಿ ಎಂದರು. ಬೆಳಗ್ಗೆ ಶ್ರೀ ಬುಡ್ಡಮ್ಮ ದೇವಿ ಮೂರ್ತಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿತು. ಸುತ್ತಲಿನ ಗ್ರಾಮಗಳ ಭಕ್ತರು ದೇವಿಯ ದರ್ಶನ ಪಡೆದರು.

ರಥಕ್ಕೆ ವಿಶೇಷ ಹೂವಿನ ಹಾರ, ಹಣ್ಣು, ಬಾಳೆದಿಂಡು, ಮಾವಿನ ಎಲೆಗಳಿಂದ ಶೃಂಗರಿಸಲಾಗಿತ್ತು. ಸಾವಿರಾರು ಭಕ್ತರ ನಡುವೆ ರಥೋತ್ಸವ ಅದ್ದೂರಿಯಾಗಿ ಜರುಗಿತು. ಭಕ್ತರು ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು, ಹೂಗಳನ್ನು ಎಸೆದು, ಘೋಷಣೆ ಕೂಗುತ್ತ ಭಕ್ತಿ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net