ದೀಪದಂತೆ ಜಗತ್ತಿಗೆ ಒಳಿತು ಮಾಡಿ; ಕೊಪ್ಪಳ ಅಭಿನವ ಗವಿಸಿದ್ಧೇಶ್ವರ ಶ್ರೀಗಳ ಆಶೀರ್ವಚನ

26082022 alavandi gavisri
Published on

ಅಳವಂಡಿ: ದೀಪ ತನ್ನನ್ನು ಸುಟ್ಟುಕೊಂಡು ಬೆಳಕು ನೀಡುತ್ತದೆ. ಅದೇ ರೀತಿ ಮನುಷ್ಯ ಅಜ್ಞಾನ ಸುಟ್ಟುಹಾಕಿ ಜ್ಞಾನ ಪಡೆದು ಜಗತ್ತಿಗೆ ಒಳಿತು ಮಾಡಬೇಕು ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಶ್ರೀಗಳು ಹೇಳಿದರು.

ಶ್ರಾವಣ ಮಾಸ ನಿಮಿತ್ತ ನಿಲೋಗಿಪುರ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಕಲಬುರಗಿ ಶ್ರೀ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ನಿರ್ದಿಷ್ಟ ಗುರಿ ತಲುಪಲು ಧೈರ್ಯವಾಗಿ ಮುನ್ನುಗ್ಗಿ ಯಶಸ್ಸು ಪಡೆಯಬೇಕು. ಬೇರೆಯವರ ತಪ್ಪು ಕಂಡು ಹಿಡಿದು ಹಿಯಾಳಿಸದೆ ನಿಮ್ಮನ್ನು ನೀವು ಮೊದಲು ತಿದ್ದಿಕೊಳ್ಳಬೇಕು. ದುರ್ಜನರ ಸಹವಾಸ ಹಾಗೂ ದುಶ್ಚಟದಿಂದ ಜೀವನ ಹಾಳಾಗುತ್ತದೆ. ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳಬೇಕು. ಸರ್ವರು ಸಮಾನರು ಎಂಬ ಗುಣ ಮೈಗೂಡಿಸಿಕೊಳ್ಳಬೇಕು. ಜಾತಿ ಮತ ಎಣಿಸದೆ ಸರ್ವರು ಸೇರಿಕೊಂಡು ಹಬ್ಬಗಳನ್ನು ಆಚರಿಸಬೇಕು ಎಂದು ಆಶಿರ್ವಚನ ನೀಡಿದರು.
ಪ್ರಮುಖರಾದ ಆನಂದರಡ್ಡಿ ರಡ್ಡೇರ, ಕಿಷ್ಟಪ್ಪ ರಡ್ಡೇರ, ರಾಮಣ್ಣ, ಹನುಮಪ್ಪ, ಶಿವಪ್ಪ, ಮಹೇಶ ರಡ್ಡೇರ, ರಾಮಣ್ಣ, ಅಂದಪ್ಪ, ಪರಮೇಶ್ವರಯ್ಯ, ಲಕ್ಷ್ಮಣ, ಹನುಮೇಶ, ರವಿ, ಪ್ರಶಾಂತ, ಬಸವರಾಜ, ದೇವೇಂದ್ರ, ಶರಣಪ್ಪ, ಈರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net