

ಮಡಿಕೇರಿ:
ಮಡಿಕೇರಿ ದಸರಾ ಹಿನ್ನೆಲೆಯಲ್ಲಿ ಮಡಿಕೇರಿ ನಗರ ದಸರಾ ಅಲಂಕಾರ ಸಮಿತಿ ವತಿಯಿಂದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿರುವುದಾಗಿ ಸಮಿತಿ ಅಧ್ಯಕ್ಷ ಎಂ.ಎ. ಮುನೀರ್ ಮಾಚಾರ್ ತಿಳಿಸಿದ್ದಾರೆ.
ಸೋಮವಾರ (ಸೆ.22) ಕರಗ ಪ್ರಾರಂಭೋತ್ಸವ ದಿನ ಬನ್ನಿ ಮಂಟಪದಿAದ ಶ್ರೀ ಪೇಟೆ ಶ್ರೀ ರಾಮ ಮಂದಿರ ತನಕ ಮನೆಗಳ ಮುಂದೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಚುಕ್ಕಿ ರಂಗೋಲಿ, ಎಳೆ ರಂಗೋಲಿ, ಬಣ್ಣದ ರಂಗೋಲಿ ಹಾಗೂ ಹೂವಿನ ರಂಗೋಲಿ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಯುಧ ಪೂಜೆ ದಿನ ವಿವಿಧ ವಾಹನಗಳ ಅಲಂಕಾರ ಸ್ಪರ್ಧೆ ಆಯೋಜಿಸಲಾಗಿದೆ. 10 ವಿಭಾಗಗಳಲ್ಲಿ ವಾಹನಗಳ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ವಾಹನಗಳು ಅಂದು ಸಂಜೆ 7 ಗಂಟೆ ಒಳಗಾಗಿ ಗಾಂಧಿ ಮೈದಾನದಲ್ಲಿ ಬಂದು ನಿಂತಿರಬೇಕು. ಅ.2ರ ದಸರಾದಂದು ಸಂಜೆ 7 ಗಂಟೆಯಿAದ ಅಂಗಡಿ ಅಲಂಕಾರ ಮತ್ತು ದೇವಾಲಯಗಳ ಅಲಂಕಾರ ಸ್ಪರ್ಧೆ ಆಯೋಜಿಸಲಾಗಿದೆ. ಅಂಗಡಿಗಳ ಅಲಂಕಾರ ಸ್ಪರ್ಧೆಯಲ್ಲಿ 19 ವಿವಿಧ ವಿಭಾಗಗಳಿವೆ. ದೇವಾಲಯಗಳ ಅಲಂಕಾರ ಸ್ಪರ್ಧೆಯಲ್ಲಿ ಎಲ್ಲಾ ದೇವಾಲಯಗಳಿಗೂ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಗೌರವ ಸಲಹೆಗಾರ ಪಿ.ಜೆ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಕೋಚನ ಎಂ. ಚೇತನ್, ಖಜಾಂಚಿ ರಫೀಕ್ ದಾದಾ, ಸಂಘಟನಾ ಕಾರ್ಯದರ್ಶಿ ಹರ್ಷಿತ್ ಕುಮಾರ್ ಹಾಗೂ ಸಂಚಾಲಕ ಖಲೀಲ್ ಬಾಷಾ ಇದ್ದರು.