ಆಳಂದ; ನೆಲ- ಜಲ ಕಳೆದುಕೊಂಡಿದ್ದೇವೆ, ಭಾಷೆ ಉಳಿಸಿಕೊಳ್ಳೋಣ

PH 05
Published on

ಆಳಂದ: ಕನ್ನಡ ಭಾಷೆ ಉಳಿವಿಗೆ ಮತ್ತು ಬೆಳವಣಿಗೆಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ನಾವು ಕನ್ನಡ ಮಾತನಾಡೋಣ, ಅನ್ಯ ಭಾಷಿಕರಿಗೂ ಕನ್ನಡ ಕಲಿಸೋಣ ಎಂದು ಸಂಬುದ್ಧ ಕಾಲೇಜಿನ ಪ್ರಾಚಾರ್ಯ ಸಂಜಯ ಪಾಟೀಲ್ ಹೇಳಿದರು.

ತಾಲೂಕು ಆಡಳಿತ ಸೌಧದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಉಪನ್ಯಾಸ ನೀಡಿ, ಮಗು ಅನುಕರಣೆಯಿಂದ ಭಾಷೆ ಕಲಿಯುತ್ತದೆ. ಹೀಗಾಗಿ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಬೇಕು. ಅಗತ್ಯವಿದ್ದರೆ ಪರಭಾಷೆ ಕಲಿಸಬೇಕು. ಅಖಂಡ ಕರ್ನಾಟಕ ಉಳಿವಿಗಾಗಿ ಎಲ್ಲರೂ ಹೋರಾಡಬೇಕಿದೆ. ನಮ್ಮ ನೆಲ, ಜಲ ಕಳೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಭಾಷೆಯನ್ನು ಕಳೆದುಕೊಳ್ಳುವ ಆತಂಕ ಎದುರಾಗಲಿದೆ. ಇಂದಿನಿAದಲೇ ಪ್ರತಿಯೊಬ್ಬರೂ ಎಚ್ಚರವಾಗಿ, ಕನ್ನಡ ಬೆಳೆಸೋಣ ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಹಣಮಂತ ಶೇರಿ ಮಾತನಾಡಿದರು. ತಹಸೀಲ್ದಾರ್ ಯಲ್ಲಪ್ಪ ಸುಬೇದಾರ್ ಧ್ವಜಾರೋಹಣ ನೆರವೇರಿಸಿದರು. ತಾಪಂ ಇಒ ಮಾನಪ್ಪ ಕಟ್ಟಮನಿ, ಡಿವೈಎಸ್‌ಪಿ ಗೋಪಿ ಆರ್., ಸಿಪಿಐ ಪ್ರಕಾಶ ಯಾತನೂರ, ಪಿಎಸ್‌ಐ ಮಹಾದೇವ ಪಂಚಮುಖಿ, ಪುರಸಭೆ ಮುಖ್ಯಾಧಿಕಾರಿ ಶಂಭುಲಿAಗ ಕಣ್ಣಿ, ಪ್ರಮುಖರಾದ ಡಾ.ಸಂಜಯ ರೆಡ್ಡಿ, ಕಮಲಾ ಕುಲಕರ್ಣಿ, ಶರಣಗೌಡ ಪಾಟೀಲ್, ಶಾಂತಪ್ಪ ಜಾಧವ್, ಶ್ರೀಕಾಂತ ಮೇಗಂಜಿ, ರಾಮಚಂದ್ರ ಗೋಳಾ, ಸುನೀತಾ ಹುಡಗಿ, ಶ್ರುತಿ ಪಾಟೀಲ್, ಸಂಗಮೇಶ ಬಿರಾದಾರ, ಆನಂದಕುಮಾರ, ನಿರ್ಮಲಾ, ಮಹಾಂತೇಶ ಸಣ್ಣಮನಿ, ಈರಣ್ಣ ಆಳಂದ, ಬಾಬುರಾವ ಮಡ್ಡೆ, ದವಲಪ್ಪ ವಣದೆ, ಬಾಬುರಾವ ಸುಳ್ಳದ, ಆನಂದರಾವ ಯಲ್ಲಶಟ್ಟಿ, ಪ್ರಭುಲಿಂಗ ಪಾಟೀಲ್ ಇತರರಿದ್ದರು. ಕಲ್ಯಾಣಪ್ಪ ಬಿಜ್ಜರಗಿ ನಿರೂಪಣೆ ಮಾಡಿದರು. ಶಿವರಣಪ್ಪ ಪೂಜಾರಿ, ಅಶೋಕ ಬಸವರಾಜ ತೇಲಿ ಸಂಗೀತ ಗಾಯನ ನಡೆಸಿದರು. ಭೀಮಣ್ಣಾ ಕುದುರಿ ಸ್ವಾಗತಿಸಿದರು. ರಾಕೇಶ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net