

ಆಳಂದ: ಭವ್ಯ ಭಾರತದ ಸಂಸ್ಕೃತಿ, ಸಂಸ್ಕಾರ ಹೇಳಿಕೊಡುವ ಗುರುಕುಲ ಶಿಕ್ಷಣ ಇಂದಿನ ಆಧುನಿಕ ಯುಗದಲ್ಲಿ ಅತ್ಯವಶ್ಯಕವಾಗಿದೆ ಎಂದು ಖಜೂರಿ ಕೋರಣೇಶ್ವರ ವಿರಕ್ತ ಮಠದ ಪೀಠಾಧಿಪತಿ ಶ್ರೀ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ ನುಡಿದರು.
ಖಜೂರಿಯ ಕೋರಣೇಶ್ವರ ಮಠದ ಆವರಣದಲ್ಲಿ ಶುಕ್ರವಾರ ಸಂಜೆ ಭಕ್ತರು ಹಮ್ಮಿಕೊಂಡಿದ್ದ ತಮ್ಮ 64ನೇ ಜನ್ಮದಿನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಆಡಂಬರದ ಜೀವನಕ್ಕೆ ಅಂಟಿಕೊಂಡು ನಮ್ಮ ಪರಂಪರೆಯನ್ನು ಮರೆಯಬಾರದು. ಒತ್ತಡ ಜೀವನ ಮಧ್ಯೆಯೂ ಧರ್ಮಕ್ಕೆ ಸಮಯ ಕೊಡಿ. ಭಕ್ತ ಸಮೂಹವೆಲ್ಲ ಸೇರಿ ಸಂಭ್ರಮದಿಂದ ಜನ್ಮದಿನ ಆಚರಿಸಿದ್ದೀರಿ, ಇದು ಭಕ್ತ ಸಮೂಹದ ಜನ್ಮದಿನ ಎಂದರು.
ಖಂಡಾಳದ ಮರಿ ಕೋರಣೇಶ್ವರರು, ಪ್ರಮುಖರಾದ ರೇವಣಸಿದ್ದಯ್ಯ ಗುತ್ತೇದಾರ್, ಸಂಜೀವ್ ದೇಶಮುಖ, ಶಂಕರ ಬಂಡೆ, ಸದಾಶಿವ ಬಂಗರಗಿ, ವಿರೇಶ ಹಳ್ಳೆ, ವೈಜನಾಥ ಕಂದಗೂಳೆ, ಶಿವಶರಣ ಸುಲ್ತಾನಪುರೆ, ಖಂಡಪ್ಪ ಢಗೆ, ಸಂಜು ಪೂಲಾರೆ, ಶಿವಶರಣ ನಗರೆ, ಗುರು ಕೋಳಿ, ಬಸವರಾಜ ಢಗೆ, ಶಿವರಾಜ ನಗರೆ, ಮಾರುತಿ ತಡಕಲ್, ವೈಜನಾಥ ಬಂಗರಗಿ, ಅನೀಲ ಜವಳಿ, ದಯಾನಂದ ಘಂಟೆ, ಶ್ರೀಶೈಲ ಭೀಮಾಪುರೆ, ಕರಬಸಪ್ಪ ಹೊನ್ನಾಳೆ, ಮುರುಘೇಂದ್ರ ಸ್ವಾಮಿ ಇತರರಿದ್ದರು.