ಪಿಂಚಣಿಗಾಗಿ ದಲ್ಲಾಳಿಗಳ ಮೊರೆ ಹೋಗದಿರಿ

Alamela Tehsildar, Suresh Chavalara, Pension Adalat, Moratagi,
ಮೋರಟಗಿ ಸಮೀಪದ ಕೆರೂರ ಗ್ರಾಮದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸುರೇಶ ಚಾವಲರ ಮಾತನಾಡಿದರು. ಕಂದಾಯ ನಿರೀಕ್ಷಕ ಎಂ.ಎ.ಅತ್ತಾರ, ಗ್ರಾಪಂ ಅಧ್ಯಕ್ಷೆ ಶಾಂತಾಬಾಯಿ ಉಮರಗಿ, ಪಿಡಿಒ ಬಿ.ಆರ್.ಶಹಾಪೂರ ಇದ್ದರು.
Published on

ಮೋರಟಗಿ: ಸರ್ಕಾರಿ ಯೋಜನೆಗಳು ಮನೆ ಬಾಗಿಲು ತಟ್ಟುತ್ತಿದ್ದು, ಅಂಗವಿಕಲರು, ವೃದ್ಧರು, ವಿಧವೆಯರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಲಮೇಲ ತಹಸೀಲ್ದಾರ್ ಸುರೇಶ ಚಾವಲರ ಹೇಳಿದರು.

ಸಮೀಪದ ಕೆರೂರ ಗ್ರಾಮದ ಸರ್ಕಾರಿ ಪ್ರಾರ್ಥಮಿಕ ಶಾಲೆಯಲ್ಲಿ ಕಂದಾಯ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಮುಗ್ದ ಜನರು ಅನಾವಶ್ಯಕವಾಗಿ ಏಜೆಂಟರ ಬಳಿ ಹೋಗಿ ದುಡ್ಡು ಹಾಳುಮಾಡಿಕೊಂಡು ಮೋಸ ಹೋಗಬಾರದು. ನೇರವಾಗಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಬೇಟಿಯಾಗಿ ಅರ್ಜಿ ಸಲ್ಲಿಸಿದರೆ ಆದೇಶ ಪತ್ರಗಳು ಮನೆ ಬಾಗಿಲಿಗೆ ಬರುತ್ತವೆ ಎಂದರು.

ಕಂದಾಯ ನಿರೀಕ್ಷಕ ಎಂ.ಎ.ಅತ್ತಾರ ಮಾತನಾಡಿ, ಸಂಧ್ಯಾ ಸುರಕ್ಷಾ ಯೋಜನೆಗೆ ಕಡ್ಡಾಯವಾಗಿ 65 ವಯಸ್ಸಾಗಿರಬೇಕು. ಅವರ ವಾರ್ಷಿಕ ಆದಾಯ 32 ಸಾವಿರ ಇರಬೇಕು, 5 ಎಕರೆಗಿಂತ ಹೆಚ್ಚು ಆಸ್ತಿ ಇರಬಾರದು. ಇನ್ನುಳಿದ ಪಿಂಚಣಿಗಳಾದ ಇಂದಿರಾ ವೃದ್ಧಾಪ್ಯ ವೇತನ, ಅಂಗವಿಕಲ, ವಿಧವಾ ವೇತನ, ಮನಸ್ವಿನಿ, ಮೈತ್ರಿ ಪಿಂಚಣಿಗೂ ಸರ್ಕಾರದ ನಿಮಯಮಾವಳಿ ಪ್ರಕಾರ ಅರ್ಜಿ ಸಲ್ಲಿಸಬೇಕು. ದಲ್ಲಾಳಿಗಳ ಮಾತು ಕೇಳಿ ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿಯಲ್ಲಿ ವಯಸ್ಸು ತಿದ್ದುಪಡಿ ಮಾಡಿಸಿ ಸರ್ಕಾರಕ್ಕೆ ದ್ರೋಹ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಗ್ರಾಪಂ ಅಧ್ಯಕ್ಷೆ ಶಾಂತಾಬಾಯಿ ಉಮರಗಿ, ಪಿಡಿಒ ಬಿ.ಆರ್.ಶಹಾಪೂರ, ಕಾರ್ಯದರ್ಶಿ ಬಸಲಿಂಗಯ್ಯ ರಾಮಗಿರಿಮಠ, ಪ್ರೇಮನಗೌಡ ಪಾಟೀಲ, ಮುಖ್ಯಶಿಕ್ಷಕ ಎಂ.ಎನ್.ಕಾಚೂರ, ಪಿ.ಜಿ.ಪಾಟೀಲ, ಶಿವಲಿಂಗಪ್ಪಗೌಡ ಬಿರಾದಾರ ಹಾಗೂ ಆಶಾ- ಅಂಗನವಾಡಿ ಕಾರ್ಯಕರ್ತರು, ಶಾಲೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net