

ಆಲಮೇಲ: ಪಟ್ಟಣದ ಕಡಣಿ ರಸ್ತೆಯಲ್ಲಿರುವ ಕೆಪಿಆರ್ ಸಕ್ಕರೆ ಕಾರ್ಖಾನೆಯಲ್ಲಿ ಶನಿವಾರ ಬೆಳಗ್ಗೆ ಆಲಮೇಲ ಗುರು ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾರ್ಚಾಯರು ಹಾಗೂ ತಾರಾಪೂರ ಮಠದ ಗುರುಲಿಂಗ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಕಾರ್ಖಾನೆಯ ಬೈಲರ್ ಪೂಜೆ ನೆರವೇರಿಸಿ, ಪ್ರಸಕ್ತ ಸಾಲಿನ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನಿಡಿದರು.
ಕಾರ್ಖಾನೆ ಆಡಳಿತಾಧಿಕಾರಿ ಪಾರ್ಥಿವನ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಈ ಭಾಗದ ರೈತರ ಸಹಕಾರದಿಂದ ಕಾರ್ಖಾನೆಯು ಪ್ರಸಕ್ತ ಸಾಲಿನ ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸಿಸಲಾಗಿದೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಕಾರ್ಖಾನೆಗೆ ಕಬ್ಬು ಸಾಗಿಸುವ ಭರವಸೆ ನಿಡಿದ್ದಾರೆ. ಅವರ ಕಬ್ಬಿಗೆ ತಕ್ಕಂತೆ ಸರ್ಕಾರ ನಿಗದಿ ಮಾಡಿದ ದರ ನೀಡಿ ಸಕಾಲಕ್ಕೆ ಪಾವತಿಸಲಾಗುವುದು. ರೈತರು ಸಹಕರಿಸಬೇಕು ಎಂದು ಹೇಳಿದರು.
ಕಾರ್ಖಾನೆಯ ನಿರ್ದೇಶಕ ಮಲ್ಲಿಕಾರ್ಜುನ ಜೋಗುರ ಮಾತನಾಡಿದರು. ಪ್ರಗತಿಪರ ರೈತರಾದ ಶರಣಪ್ಪ ಕಣಮೇಶ್ವರ, ಬಸವರಾಜ ತಾವರಖೇಡ, ಬಾಬು ಕೋತಂಬರಿ, ಬಸವರಾಜ ತಾವರಗೇರಿ, ಶರಣು ಕತ್ತಿ ಹಾಗೂ ಕಾರ್ಖಾನೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.