ಯತ್ನಾಳ ಶಾಸಕರಾಗಿರುವವರೆಗೂ ವಿಮಾನ ನಿಲ್ದಾಣ ಆಗದು

AMT-28-1
Published on

ಆಲಮಟ್ಟಿ: ಬಸನಗೌಡ ಪಾಟೀಲ ಯತ್ನಾಳ ವಿಜಯಪುರ ಶಾಸಕರಾಗಿರುವವರೆಗೂ ವಿಜಯಪುರ ವಿಮಾನ ನಿಲ್ದಾಣ ಪೂರ್ಣಗೊಳ್ಳುವುದಿಲ್ಲ ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಹಾಗೂ ಆಹಾರ ಖಾತೆ ಸಚಿವ ಉಮೇಶ ಕತ್ತಿ ಹೇಳಿದರು.

ಲವಕುಶ ಉದ್ಯಾನಕ್ಕೆ ಸೋಮವಾರ ಭೇಟಿ ನೀಡಿದಾಗ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಕುಟುಂಬದವರ ಮೇಲೆ ಸದಾಕಾಲ ಆರೋಪ ಮಾಡುತ್ತಿರುವ ಯತ್ನಾಳ ಅವರನ್ನು ಈಗ ಹನುಮಂತನನ್ನು ಕಟ್ಟಿ ಹಾಕಿದ ರೀತಿಯಲ್ಲಿ ಕಟ್ಟಿಹಾಕಿದ್ದಾರೆ ಎಂದರು.

ಆಲಮಟ್ಟಿ ಶಾಸಿ ಜಲಾಶಯದ ಮುಂಭಾಗದಲ್ಲಿ ವೈರ್ ಕಾರ್, ಜಲಕ್ರೀಡೆ, ಜಂಗಲ್ ರೆಸಾರ್ಟ್, ವಾಟರ್ ಪಾರ್ಕ್ ಸೇರಿದಂತೆ ಈ ಭಾಗದ ಅಭಿವೃದ್ಧಿ ಹಾಗೂ ಜಲಾಶಯದಲ್ಲಿ ಸಂಗ್ರಹವಾಗುವ ನೀರು ಮತ್ತು ಎತ್ತರ, ನೀರಾವರಿಗೊಳಪಡುವ ಜಮೀನುಗಳ ಬಗ್ಗೆ ಅಧೀಕ್ಷಕ ಅಭಿಯಂತರ ಡಿ.ಬಸವರಾಜ ಮಾಹಿತಿ ನೀಡಿದರು.

ಡ್ಯಾಂ ಕೆಡವುತ್ತೇವೆ ಎಂದ ಶಾಸಕ!
ಸಚಿವರೊಂದಿಗಿದ್ದ ಶಾಸಕ ಸಿದ್ದು ಸವದಿ, 20 ಹಳ್ಳಿಗಳ ಸ್ವಾಧೀನಪಡಿಸಿಕೊಂಡು ಪರಿಹಾರ ನೀಡದೆ ಜಲಾಶಯ ಎತ್ತರಿಸಲು ಮುಂದಾದರೆ ಡ್ಯಾಂ ಕೆಡವುತ್ತೇವೆ ಎಂದು ವ್ಯಂಗ್ಯವಾಡಿದಾಗ ನಿಮ್ಮನ್ನು ಒಳಗೆ ಹಾಕಿ ಕಟ್ಟುತ್ತಾರೆ ಎಂದು ಸಚಿವರು ಲೇವಡಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net