ಅಲಾಯಿ ಕುಣಿಯಲ್ಲಿ ನಮಾಜ್

ನಮ್ ಜ
ಕನಕಗಿರಿಯ ಅಂಬೇಡ್ಕರ್ ವೃತ್ತದ ಬಳಿಯಲ್ಲಿ ಕೌಡೇಪೀರ್ ಅಲಾಯಿ ಕುಣಿಯಲ್ಲಿ ಕಂಬಳಿ ಹಾಸಿ ನಮಾಜ್ ಮಾಡುತ್ತಿರುವ ಖಲಂದರ್.
Published on

ಕನಕಗಿರಿ: ಕೌಡೇಪೀರ್ ದೇವರನ್ನು ಹೊರುವ ಮುಜಾವರರೊಬ್ಬರು, ಬೆಂಕಿಯಿದ್ದ ಅಲಾಯಿ ಕುಣಿಯಲ್ಲಿ ಸೋಮವಾರ ಬೆಳಗಿನ ಜಾವ ಕಂಬಳಿ ಹಾಸಿ ಪ್ರಾರ್ಥನೆ (ನಮಾಜ್) ಮಾಡಿದ್ದಾರೆ.

ಕೌಡೇಪೀರ್ ದೇವರುಗಳ ಸವಾರಿ ಆರಂಭವಾಗುವ ಮುನ್ನ ದೇವರು ಹೊತ್ತು ಕುಣಿಯುವ ಖಲಂದರ ಹಣಗಿ ಮುಜಾವರ ಅಲಾಯಿ ಕುಣಿಯಲ್ಲಿ ಕಂಬಳಿ ಹಾಸಿಕೊಂಡು 30 ಸೆಕೆಂಡ್‌ಗಳ ಕಾಲ ನಮಾಜ್ ಮಾಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಈ ದೃಶ್ಯಕ್ಕೆ ನೂರಾರು ಜನರು ಸಾಕ್ಷಿಯಾಗಿದ್ದಾರೆ. ಖಲಂದರ್ ಕಳೆದ ಏಳೆಂಟು ವರ್ಷಗಳಿಂದ ಕೌಡೇಪೀರ್ ದೇವರ ಹೊತ್ತು ಕುಣಿಯುತ್ತಿದ್ದು, ಈ ರೀತಿ ನಮಾಜ್ ಮಾಡಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net