ಅಲಾಯಿ ದೇವರ ಬೆಳ್ಳಿಚೌಕಿ ಮೆರವಣಿಗೆ

13 DVD 2A
ದೇವದುರ್ಗ ತಾಲೂಕು ಜಾಲಹಳ್ಳಿಯಲ್ಲಿ ಮೊಹರಂ ಅಂಗವಾಗಿ ಹುಸೇನ್ ಪಾಷಾ ದೇವರ ಬೆಳ್ಳಿಯ ಚೌಕಿಯನ್ನು ಮೆರವಣಿಗೆ ಮಾಡಲಾಯಿತು. ಸಮಿತಿ ಅಧ್ಯಕ್ಷ ಯಾಸೀನ್‌ಸಾಬ್ ಮುಲ್ಲಾ, ಹುಸೇನ್‌ಸಾಬ್ ಸರನೋಬತ್, ಶ್ರೀಧರ್ ದೇಸಾಯಿ, ರಾಜಾ ರಾಮಭದ್ರಪ್ಪ ನಾಯಕದೊರೆ, ಪ್ರಭಾಕರ ದೇಶಪಾಂಡೆ, ಬಸನಗೌಡ ಪಾಟೀಲ್, ಸಿದ್ದಪ್ಪ ನಾಯಕ ಭಾಗವಹಿಸಿದ್ದರು.
Published on

ದೇವದುರ್ಗ: ತಾಲೂಕಿನ ಜಾಲಹಳ್ಳಿ ಪಟ್ಟಣದಲ್ಲಿ ಮೊಹರಂ ಅಂಗವಾಗಿ ಶುಕ್ರವಾರ ಹುಸೇನ್ ಪಾಷಾ ದೇವರು ಕೂರಿಸುವ ಸುಮಾರು ಐದೂವರೆ ಕೆ.ಜಿ. ತೂಕದ ಬೆಳ್ಳಿಯ ಚೌಕಿಯನ್ನು ಭಕ್ತರು ಭಾಜಾಭಜಂತ್ರಿಯೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮಾಡಿದರು.

ಪಟ್ಟಣದಲ್ಲಿ ಹಿಂದು-ಮುಸ್ಲಿಮರು ಸೇರಿ ಮೊಹರಂ ಆಚರಿಸುವುದು ವಿಶೇಷ. ಪಟ್ಟಣದಲ್ಲಿ 30ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದರೂ ಒಂದೇ ಮಸೀದಿಯಲ್ಲಿ ಹುಸೇನ್‌ಪಾಷಾ, ಸೈಯದ್ ಖಾಸಿಂ, ಇಮಾಮ್ ಖಾಸಿಂ, ಹೈದರ್ ಅಲಿ ಎನ್ನುವ ನಾಲ್ಕು ಪಂಜಾಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಮೊಹರಂನ 5ನೇ ದಿನವಾದ ಶುಕ್ರವಾರ ದೇವರನ್ನು ಪ್ರತಿಷ್ಠಾಪಿಸಲಾಗಿದೆ.

ಪಂಜಾಗಳನ್ನು ಹುಸೇನ್ ಪಾಷಾ ದೇವರಿಗಾಗಿ ಬೆಳ್ಳಿಯ ಚೌಕಿ ಮಾಡಿಸಲಾಗಿದೆ. ಪಟ್ಟಣದ ವರ್ತಕರಿಂದ ಬೆಳ್ಳಿ ಸಂಗ್ರಹಿಸಿ ಹಾಗೂ ಅಲಾಯಿ ಸಮಿತಿಯಿಂದ 2 ಲಕ್ಷ ರೂ. ಸಂಗ್ರಹ ಮಾಡಿ ಚೌಕಿ ಮಾಡಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಯಾಸೀನ್‌ಸಾಬ್ ಮುಲ್ಲಾ, ಹುಸೇನ್‌ಸಾಬ್ ಸರನೋಬತ್ ತಿಳಿಸಿದ್ದಾರೆ.

ಮೆರವಣಿಗೆಯಲ್ಲಿ ಶ್ರೋಧರ್ ದೇಸಾಯಿ, ರಾಜಾ ರಾಮಭದ್ರಪ್ಪ ನಾಯಕದೊರೆ, ಪ್ರಭಾಕರ ದೇಶಪಾಂಡೆ, ಬಸನಗೌಡ ಪಾಟೀಲ್, ಸಿದ್ದಪ್ಪ ನಾಯಕ ಗುಮೇದಾರ್, ಎಚ್.ಪಿ.ಬಸವರಾಜ, ಯಾಸೀನ್‌ಸಾಬ್, ಇಬ್ರಾಹಿಂಸಾಬ್ ಆರ್ತಿ, ಯೂಸೂಫ್‌ಸಾಬ್, ಹುಸೇನ್‌ಸಾಬ್ ಬಳಿಗಾರ, ಗ್ರಾಪಂ ಸದಸ್ಯರಾದ ರಮೇಶ ತೆಗ್ಗೆಳ್ಳಿ, ಮತ್ತೂಮ್ ಪಾರಶಿ, ಮಲ್ಲಣ್ಣ ಸೌದ್ರಿ, ಶಂಕರಗೌಡ ಪಾಟೀಲ್, ಗೋವಿಂದರಾಜ ನಾಯಕ, ಶೇಖರ್ ಸುರಪುರ, ಯಂಕೋಬ ಪೂಜಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net