ಅಳಗವಾಡಿ ಗ್ರಾಪಂಗೆ ಶ್ರೀಕಾಂತ ಅಧ್ಯಕ್ಷ

12Alagwadi1
Published on

ಅಳಗವಾಡಿ: ಕುಮಾರ ಬನಶಂಕರಿ ರಾಜೀನಾಮೆಯಿಂದ ತೆರವಾದ ಸ್ಥಳೀಯ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಜರುಗಿದ ಚುನಾವಣೆಯಲ್ಲಿ ಶ್ರೀಕಾಂತ ವಡಗಾಂವಿ 12 ಮತಗಳಿಂದ ಗೆಲುವು ಸಾಧಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.

ಬಿಜೆಪಿ ಬೆಂಬಲಿತ ಗ್ರಾಪಂನಲ್ಲಿ ಅಚ್ಚರಿಯಂತೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಒಟ್ಟು 25 ಸದಸ್ಯ ಬಲದ ಗ್ರಾಪಂನಲ್ಲಿ ಮೂವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ರಾಯಬಾಗ ಸಿಡಿಪಿಒ ಭಾರತಿ ಕಾಂಬಳೆ ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಪಿಡಿಒ ಮಂಜು ದಳವಾಯಿ, ಗ್ರಾಮ ಆಡಳಿತ ಅಧಿಕಾರಿ ರುಕ್ಮೀಣಿ ಕೊಟ್ರೆ, ಗ್ರಾಪಂ ಸದ್ಯಸರಾದ ಸವಿತಾ ಪಾಟೀಲ, ಸಾವಕ್ಕ ಲಠ್ಠೆ, ರೇಣುಕಾ ಕಾಂಬಳೆ, ಆನಂದ ಕಾಂಬಳೆ, ಸುನೀಲ ಕಾಂಬಳೆ, ಕಾಶೆವ್ವ ಮಂಗಳಸೂಳಿ, ಅಮತವ್ವ ಹೊಳ್ಕರ, ಜ್ಯೋತೆಪ್ಪ ಪಾಟೀಲ, ಬಾಬುರಾವ್ ಪಾಟೀಲ, ರಾಮಕಷ್ಣ ಲಠ್ಠೆ, ಬಸು ಕೋಳಿ, ಈಶ್ವರ ವಡಗಾಂವಿ, ಮುತ್ತಪ್ಪ ವಡಗಾಂವಿ, ಬಸವರಾಜ ಬೆಲಶಟ್ಟಿ, ಬಸವರಾಜ ವಡಗಾಂವಿ, ರಮೇಶ ಕಾಂಬಳೆ, ಮಧುಕರ ಕಾಂಬಳೆ, ಬಸವರಾಜ ಅಸ್ಕಿ, ರಮೇಶ ಅಸೋದೆ, ವಿಠ್ಠಲ ಮಾಂಗ, ರಂಗಪ್ಪ ಮಾಂಗ, ನಾರಾಯಣ ನಾಯಿಕ ಹಣಮಂತ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net