ಪಿಎಚ್.ಡಿ. ಪದವಿ ಪ್ರದಾನ

akshata mulagunda
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಅಕ್ಷತಾ ಮುಳಗುಂದ ಅವರಿಗೆ ಪಿಎಚ್.ಡಿ. ಪದವಿ ಪ್ರದಾನ ಮಾಡಲಾಯಿತು.

ಅವರು ಮಂಡಿಸಿದ ಆನ್ ಎಕ್ಸಪೆರಿಮೆಂಟಲ್ ಇನ್​ವೆಸ್ಟಿಗೇಶನ್ ಆನ್ ದಿ ಪ್ರಾಪರ್ಟೀಸ್ ಆಫ್ ಫೆರೋಸಿಮೆಂಟ್ ಪೊ›ಡ್ಯುಸ್ಡ್ ವಿತ್ ಪಾಲಿಮರ್ ಮಾಡಿಫೈಡ್ ಸಿಲಿಕಾ ಪ್ಯೂಮ್ ಕಾಂಕ್ರಿಟ್ ಎಂಬ ವಿಷಯ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ನೀಡಲಾಯಿತು.

ಧಾರವಾಡದ ಎಸ್​ಡಿಎಂ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಡಿ.ಕೆ. ಕುಲಕರ್ಣಿ ಮಾರ್ಗದರ್ಶಕರಾಗಿದ್ದರು. ಅಕ್ಷತಾ ಮುಳಗುಂದ ಇವರು ಹುಬ್ಬಳ್ಳಿಯ ವಿದ್ಯಾನಿಕೇತನ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆನಂದ ಮುಳಗುಂದ ಇವರ ಪುತ್ರಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net