ಮುಡಿಪುವಿನಲ್ಲಿ ಅಕ್ಷರೋತ್ಸವ,ಸ್ವಚ್ಛೋತ್ಸವ ಸಂಪನ್ನ

Ull_Aksharotsava
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ ಮುಡಿಪು ಜನಶಿಕ್ಷಣ ಟ್ರಸ್ಟ್ ಮತ್ತು ವಿವಿಧ ಸಂಘ- ಸಂಸ್ಥೆಗಳ ಆಶ್ರಯದಲ್ಲಿ ನವಸಾಕ್ಷರರ ಸಂಟನೆಯ 33ನೇ ವರ್ಷದ ‘ಅಕ್ಷರೋತ್ಸವ-ಸ್ವಚ್ಛೋತ್ಸವ ಕಾರ್ಯಕ್ರಮ ನಡೆಯಿತು. ಬನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರಿಗ ಅಂಗನವಾಡಿ ಕೇಂದ್ರದ ಪುಟಾಣಿಗಳಾದ ಶ್ರಿಯಾನ್, ದೈವಿಕ್ ಮತ್ತು ಲೀಶಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನ ಶೆಟ್ಟಿ ಮಾತನಾಡಿ, ಅವಿದ್ಯಾವಂತರಿಗೆ ಅಕ್ಷರಜ್ಞಾನ ನೀಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪ್ರತೀ ಗ್ರಾಮಸಭೆಗಳಲ್ಲೂ ವಯಸ್ಕರ ಶಿಕ್ಷಣ ಇಲಾಖೆಯಿಂದ ಅಧಿಕಾರಿಗಳು ಭಾಗವಹಿಸುವಂತೆ ಸುತ್ತೋಲೆ ಹೊರಡಿಸಬೇಕು ಎಂದರು. ಉದ್ಘಾಟನಾ ಸವಾರಂಭದಲ್ಲಿ ಮುಡಿಪು ಜನಜೀವನ ಅಧ್ಯಕ್ಷ ರಮೇಶ್ ಶೇಣವ, ರಾಧಾಕೃಷ್ಣ ರೈ ಉಮಿಯ, ಇಬ್ರಾಹಿಂ ನಡುಪದವು, ಇರಾ ಗ್ರಾ.ಪಂ. ಅಧ್ಯಕ್ಷ ಎಂ.ಬಿ.ಉಮರ್, ಪುಂಡರಿಕಾಕ್ಷ,ಡಾ.ಸಂತೋಷ್, ಪುಷ್ಪರಾಜ್ ಶೆಟ್ಟಿ, ಯಶೋದಾ, ಡಾ.ಯಶಸ್ವಿನಿ, ಶಮೀವಾ, ಶಿಕ್ಷಕಿ ವಿಜಯಲಕ್ಷ್ಮೀ, ವಿಶೇಷ ಚೇತನ ರಮೀಜ್ , ಇಸ್ಮಾಯಿಲ್ ಕಣಂತೂರು, ಸೆಲ್ಕೋದ ವಿನೋದ್, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಫಾತಿಮಾ, ಆದಿವಾಸಿ ಸಮುದಾಯದ ರಾಮ, ಕಲಾವಿದ ದಿನೇಶ್ ಮಡ್ಯಾರ್ ಮೊದಲಾದವರಿದ್ದರು. ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ಕಾರ್ಯಕ್ರಮ ಪ್ರಯುಕ್ತ ಕೊರಗ ಸಮುದಾಯದಿಂದ ಕೊಳಲು ವಾದನ, ಡೋಲು ಕುಣಿತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸ್ಟೈಲ್ ಸ್ಕಿಲ್ ಸ್ಕೂಲ್ ವಿದ್ಯಾರ್ಥಿನಿಯರ ಒಪ್ಪಣ ಹಾಡು ವಿಶೇಷ ಆಕರ್ಷಣೆಯಾಗಿತ್ತು. ಮನೆಯಲ್ಲೇ ಬೆಳೆದ ತರಕಾರಿ ಹಾಗೂ ಇತರ ವಸ್ತುಗಳ ಪ್ರದರ್ಶನ ಮತ್ತು ವಾರಾಟ, ಮೆಹಂದಿ ಇಡುವ ವ್ಯವಸ್ಥೆ ವಾಡಲಾಗಿತ್ತು. ತಲಪಾಡಿ ಶಾರದಾ ಆಯುರ್ವೇದ ವೈದ್ಯಕೀಯ ಆಸ್ಪತ್ರೆ ವತಿಯಿಂದ ಆರೋಗ್ಯ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಡೆಯಿತು.

ಗ್ರಾಮೀಣ ಭಾಗದಲ್ಲಿರುವ ಅವಿದ್ಯಾವಂತರಿಗೆ ವಯಸ್ಸಿನ ಹಂಗಿಲ್ಲದೆ ಅಕ್ಷರ ಕಲಿಸಿ ಅವನ್ನೂ ಸವಾಜದಲ್ಲಿ ಗುರುತಿಸುವಂತೆ ವಾಡುವುದಲ್ಲದೆ ಅಕ್ಷರೋತ್ಸವ ನಡೆಸಿ ಸಾರ್ವಜನಿಕರ ಮುಂದೆ ಭಾಷಣ ವಾಡುವಂತೆ ಪ್ರೇರೇಪಿಸುವ ಜನಶಿಕ್ಷಣ ಟ್ರಸ್ಟ್ ಕಾರ್ಯ ಶ್ಲಾನೀಯ’ ರಾಧಾಕೃಷ್ಣ ರೈ ಉಮಿಯ, ಸಲಹೆಗಾರ, ಜನಶಿಕ್ಷಣ ಟ್ರಸ್ಟ್ https://www.vijayavani.net/handelu-devas-nemotsava-hon https://www.vijayavani.net/training-is-appropriate-to-be-updated

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net