ಪ್ರತಿಭೆ, ಸೃಜನಶೀಲತೆಯಿಂದ ಸಾಹಿತ್ಯ ಸೃಷ್ಟಿ

akshara
ಯುವ ಬರಹಗಾರರ ಸಮ್ಮೇಳನ ಅಕ್ಷರಯಾನ ಬರವಣಿಗೆಯ ಮೆರವಣಿಗೆ ಸಮಾರಂಭವನ್ನು ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಉದ್ಘಾಟಿಸಿದರು.
Published on

ಕಾರ್ಕಳ: ಯುವ ಲೇಖಕರು ತಮ್ಮಲ್ಲಿನ ಪ್ರತಿಭೆ, ಸೃಜನಶೀಲತೆ ಬಳಸಿ ತಮ್ಮ ಆಸಕ್ತಿಯ ಸಾಹಿತ್ಯ ಪ್ರಕಾರಗಳಲ್ಲಿ ಸಾಹಿತ್ಯ ಸೃಷ್ಟಿಸಲು ಅಣಿಗೊಳ್ಳಬೇಕು. ಸಾಹಿತ್ಯಗಳು ಬದುಕಿಗೆ ಹೊಸ ದಿಕ್ಕು ಹಾಗೂ ಬದುಕಿಗೆ ಬೇಕಾಗಿರುವ ಮೌಲ್ಯ ನೀಡುವಲ್ಲಿ ಪ್ರಯೋಜನಕಾರಿ ಎಂದು ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಹೇಳಿದರು.

ಯುವ ಮತ್ತು ಪ್ರತಿಭಾವಂತ ಬರಹಗಾರರನ್ನು ಪ್ರೋತ್ಸಾಹಿಸಲು ಕ್ರಿಯೇಟಿವ್ ಪುಸ್ತಕ ಮನೆ ಹಾಗೂ ವಿಕಾಸ ಸೇವಾ ಸಂಸ್ಥೆ ಕಾರ್ಕಳ ಸಹಯೋಗದಲ್ಲಿ ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಲ್ಲಿ ಯುವ ಬರಹಗಾರರ ಸಮ್ಮೇಳನ ಅಕ್ಷರಯಾನ ಬರವಣಿಗೆಯ ಮೆರವಣಿಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಅಶ್ವತ್ ಎಸ್.ಎಲ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಂಸದ ಪ್ರತಾಪ್ ಸಿಂಹ ಅವರು ನನ್ನ ಬರವಣಿಗೆ, ನನ್ನ ಬದ್ಧತೆ ಎಂಬ ವಿಚಾರದ ಕುರಿತು, ನಟ ಮತ್ತು ನಿರ್ದೇಶಕ ಎಸ್.ಎನ್.ಸೇತುರಾಮ್ ಕನ್ನಡ ಸಾಹಿತ್ಯದ ವರ್ತಮಾನ ಮತ್ತು ಭವಿಷ್ಯ ಎಂಬ ವಿಷಯದ ಬಗ್ಗೆ ಹಾಗೂ ಪ್ರಕಾಶ್ ಬೆಳವಾಡಿ ಸಾಹಿತ್ಯದ ಮೂಲಕ ರಾಷ್ಟ್ರೀಯ ಪ್ರಜ್ಞೆ ವಿಷಯದ ಕುರಿತು ಸಂವಾದ ನಡೆಸಿದರು. ವಾಗ್ಮಿ ಮತ್ತು ಚಿಂತಕ ಪ್ರಕಾಶ್ ಮಲ್ಪೆ, ನಿರೂಪಕ ಅವಿನಾಶ್ ಕಾಮತ್, ವಾಗ್ಮಿ ರಾಜೇಂದ್ರ ಭಟ್ ಪಾಲ್ಗೊಂಡರು.

ಪುಸ್ತಕ ಬಿಡುಗಡೆ

ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದಿಂದ ವಿ.ರವಿಶಂಕರ ಹೆಗಡೆ ಅವರ ಶ್ರೀ ಭಾರತ ಸಾವಿತ್ರೀ, ಸುದೀಕ್ಷಾ ಎಸ್.ಪೈ ಅವರ ಬಚ್ಚಿಟ್ಟ ಭಾವಗಳು, ಕೆ.ಅಶೋಕ್ ಕುಮಾರ್ ಅವರ ‘ಸೂರ್ಯಾಯ ನಮಃ’, ಅನುಬೆಳ್ಳೆ ಕಾವ್ಯನಾಮಾಂಕಿತ, ರಾಘವೇಂದ್ರ ಬಿ.ರಾವ್ ಅವರ ಬ್ಲಾೃಕ್ ಕಾಫಿ, ರಾಜೇಂದ್ರ ಭಟ್ ಅವರ ‘ರಾಜಪಥ’ ಪುಸ್ತಕಗಳು ಬಿಡುಗಡೆಗೊಂಡಿತು.

ಯುವ ಸಾಹಿತಿಗಳು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡರೆ ಸಾಹಿತ್ಯ ಕ್ಷೇತ್ರ ಸಮೃದ್ಧವಾಗಿ ಬೆಳೆಯಲು ಸಾಧ್ಯ. -ಪ್ರಕಾಶ್ ಬೆಳವಾಡಿ ನಟ ಪಠ್ಯೇತರ ಚಟುವಟಿಕೆಗಳು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿ. ಚಿಕ್ಕ ವಯಸ್ಸಿನಲ್ಲಿಯೇ ಸಾಹಿತ್ಯದ ಬೀಜ ಬಿತ್ತಿದರೆ ಜೀವನ ಪರ್ಯಂತ ಬೆಳೆಯುವ ಶಕ್ತಿ, ಆತ್ಮವಿಶ್ವಾಸ, ಜ್ಞಾನ ಲಭಿಸುತ್ತದೆ. -ಎಸ್.ಎನ್.ಸೇತುರಾಮ್ ನಟ ಮತ್ತು ನಿರ್ದೇಶಕ https://www.vijayavani.net/honoring-employees-with-honest-duty https://www.vijayavani.net/meaningful-attainment-from-guru-remembrance

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net