ಅಕ್ಷರಾಭ್ಯಾಸ ಮಾಡಿಸಿದ ಎಡಿಸಿ ನಾಗರಾಜು: ಗಾಂಧಿಭವನದಲ್ಲಿ ಆಯೋಜಿಸಿದ್ದ ಪ್ರೇರಣಾ ಕಾರ್ಯಕ್ರಮ

1 (2)
Published on

ಮಂಡ್ಯ: ನಗರದ ಗಾಂಧಿಭವನದಲ್ಲಿ ಅಕ್ಷರ ಎಜುಕೇಷನ್ ಟ್ರಸ್ಟ್‌ನ ಆಕೃತಿ ಮಾಂಟೆಸ್ಸರಿ ಆಯೋಜಿಸಿದ್ದ ಪ್ರೇರಣಾ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರು ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿದರು.

ಬಳಿಕ ಮಾತನಾಡಿದ ಅವರು, ಪ್ರತಿ ಮಗುವಿಗೆ ಅಕ್ಷರ, ಅನ್ನ, ಆರೋಗ್ಯ ಅತ್ಯಾವಶ್ಯಕ. ಸಮಸ್ಯೆ ಎದುರಾದರೂ ಪಾಲಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು. ಈ ಮೂಲಕ ಸಮಾಜದಲ್ಲಿ ಉನ್ನತ ಹುದ್ದೆ ಅಲಂಕರಿಸುವಂತೆ ಮಾಡಬೇಕು. ದೇವರ ಮೇಲೆ ಭಕ್ತಿ ಭಾವದಿಂದ ಪ್ರಾರ್ಥಿಸಿ ಅಕ್ಷರ ಅಭ್ಯಾಸ ಮಾಡಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ವಾಡಿಕೆ ಎಂದು ನುಡಿದರು.

ಹಲವರು ಶೃಂಗೇರಿ ಶಾರದಾ ದೇವಾಲಯಕ್ಕೆ ತೆರಳಿ ಪ್ರಥಮ ಅಕ್ಷರ ಬರೆಸಿಕೊಂಡು ಬಂದು ಶಾಲೆ ಸೇರಿಸುವುದನ್ನು ಕಂಡಿದ್ದೇವೆ. ಆದರೆ ಸ್ಥಳೀಯವಾಗಿಯೇ ಪವಿತ್ರ ಸ್ಥಳ ಗಾಂಧಿಭವನದಲ್ಲಿ ಪೂಜೆ ಪುರಸ್ಕಾರದೊಂದಿಗೆ ಅಕ್ಷರ ಅಭ್ಯಾಸ ಮಾಡಿಸುವ ವ್ಯವಸ್ಥೆ ನೋಡಿ ಖುಷಿಯಾಯಿತು ಎಂದು ಹೇಳಿದರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಲಂಕೇಶ್ ಮಂಗಲ ಮಾತನಾಡಿದರು. ಮಕ್ಕಳ ತಜ್ಞ ಡಾ.ವಿನಯ್, ಡಯಟ್ ಉಪನ್ಯಾಸಕ ಬಾಬು, ಅಗ್ನಿಶಾಮಕ ದಳದ ಅಧಿಕಾರಿ ಗುರುರಾಜ್, ಶಾಲೆಯ ಕಾರ್ಯದರ್ಶಿ ಅನಿತಾ, ಹರೀಶ್, ನೆಲದನಿ ಬಳಗದ ಪ್ರತಾಪ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net