ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ ಅಕ್ಷರಾಭ್ಯಾಸ

aksharabhyasa
Published on

ಕುಶಾಲನಗರ:

ಹೆಬ್ಬಾಲೆಯ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಸಲಾಯಿತು. ಹೊಸದಾಗಿ ಶಾಲೆಗೆ ದಾಖಲಾದ ಎಲ್‌ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿ ಮಕ್ಕಳು ಕಾರ್ಯಕ್ರಮದಲ್ಲಿ ಅಕ್ಷರಾಭ್ಯಾಸ ಆರಂಭಿಸಿದರು.

ಶಾಲೆಯ ವ್ಯವಸ್ಥಾಪಕ ಲೋಕೇಶ್, ಮುಖ್ಯಶಿಕ್ಷಕಿ ಲೇಖಜಾನ್, ಶಾಲೆಯ ಸಹ ಶಿಕ್ಷಕಿಯರು ಹಾಗೂ ಪೋಷಕರು ಉಪಸ್ಥಿತರಿದ್ದರು. ಅರ್ಚಕರು ಅಕ್ಷರಾಭ್ಯಾಸ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net