ಬಾರಕೂರು ದೇವಳದಲ್ಲಿ ಅಕ್ಷರ ಸಿರಿ ಕಾರ‌್ಯಕ್ರಮ

padma
padma
Published on

ಬ್ರಹ್ಮಾವರ: ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಯುವ ವೇದಿಕೆ ಮತ್ತು ಶ್ರೀ ದುರ್ಗಾಪರಮೇಶ್ವರಿ ಮಹಿಳಾ ವೇದಿಕೆಯ ವತಿಯಿಂದ ವಿದ್ಯಾರ್ಥಿಗಳಿಗೆ ಕೈ ಬರಹ ಹಾಗೂ ಪ್ರಬಂಧ ಸ್ಪರ್ಧೆ ‘ಅಕ್ಷರ ಸಿರಿ’ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.

ಶ್ವೇತಾಂಶ್ ಚೇರ್ಕಾಡಿ, ನಿರೀಕ್ಷಾ ಶೆಟ್ಟಿಗಾರ್, ಕಿಶನ್ ಸಾಸ್ತಾನ, ಆರಾಧ್ಯ ಶೆಟ್ಟಿಗಾರ ನೀಲಾವರ, ಹರ್ಷಿತಾ ಬ್ರಹ್ಮಾವರ, ಐಶ್ವರ್ಯ ಜಪ್ತಿ, ಧನುಶ್ರೀ ಎಡಬೆಟ್ಟು, ಸ್ಮಿತಾ ಕೊಪ್ಪ, ಸಂಜನಾ ರಂಗನಕೇರಿ ಸ್ಪರ್ಧೆಯ ವಿಜೇತರಾದರು.

ದೇಗುಲದಲ್ಲಿ ಮಾಸಿಕ ಸತ್ಯನಾರಾಯಣ ಪೂಜೆ ಸಹಿತ ವಿವಿಧ ಸೇವೆಗಳು ನೆರವೇರಿದವು. ರಂಗನಕೇರಿ ಯಶೋದಾ ಮತ್ತು ಶ್ರೀನಿವಾಸ ಶೆಟ್ಟಿಗಾರ, ಡಾ.ಜಯರಾಮ್ ಶೆಟ್ಟಿಗಾರ್, ಶಶಿಧರ್ ಶೆಟ್ಟಿಗಾರ್ ಬಾರಕೂರು, ಶೋಭಾ ಅರುಣ ಶೆಟ್ಟಿಗಾರ್ ಕೆಳಾರ್ಕಳಬೆಟ್ಟು ಅವರಿಗೆ ಪ್ರಸಾದ ನೀಡಿ ಗೌರವಿಸಲಾಯಿತು.

ಸಂಘಟನಾ ಸಮಿತಿ ಅಧ್ಯಕ್ಷ ಭಾಸ್ಕರ್ ಶೆಟ್ಟಿಗಾರ್, ಗುರಿಕಾರ ಶ್ರೀನಿವಾಸ ಶೆಟ್ಟಿಗಾರ ಕೊಳಂಬೆ, ಜನಾರ್ದನ್ ಶೆಟ್ಟಿಗಾರ್ ವಕ್ವಾಡಿ, ಚಂದ್ರಾವತಿ ಸದಾಶಿವ ಶೆಟ್ಟಿಗಾರ, ಸಂಜೀವ ಶೆಟ್ಟಿಗಾರ ಸಾಸ್ತಾನ, ಜನಾರ್ದನ್ ಶೆಟ್ಟಿಗಾರ್ ಚೇರ್ಕಾಡಿ, ಸುಧಾಕರ ವಕ್ವಾಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net