ಅಡುಗೆ ತಯಾರಿಕೆಯಲ್ಲಿ ಸುರಕ್ಷತಾ ಕ್ರಮ ಅನುಸರಿಸಿ; ಅನಿತಾ ಸೂಚನೆ

AKSHARA DASOHA
ಯಲಬುರ್ಗಾ ಸರ್ಕಾರಿ ಪಪೂ ಕಾಲೇಜಿನಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯ ಪರಿಣಾಮಕಾರಿ ಅನುಷ್ಠಾನಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿಯಲ್ಲಿ ಜಿಪಂ ಅಕ್ಷರ ದಾಸೋಹ ಕಾರ್ಯಕ್ರಮ ಶಿಕ್ಷಣಾಧಿಕಾರಿ ಅನಿತಾ ಮಾತನಾಡಿದರು. ಅಕ್ಷರ ದಾಸೋಹ ತಾಲೂಕು ನಿರ್ದೇಶಕ ಎಫ್.ಎಂ.ಕಳ್ಳಿ, ಪ್ರಭಾರ ಬಿಇಒ ಶೋಕ ಗೌಡರ್, ಸಂಪನ್ಮೂಲ ವ್ಯಕ್ತಿಗಳಾದ ಶರಣಪ್ಪ ಕುರನಾಳ, ಮಂಜುನಾಥಯ್ಯ ಇದ್ದರು.
Published on

ಯಲಬುರ್ಗಾ: ಮಧ್ಯಾಹ್ನ ಉಪಹಾರ ಯೋಜನೆಯ ಪರಿಣಾಮಕಾರಿ ಅನುಷ್ಠಾನದಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಅಕ್ಷರ ದಾಸೋಹ ಕಾರ್ಯಕ್ರಮ ಶಿಕ್ಷಣಾಧಿಕಾರಿ ಅನಿತಾ ಹೇಳಿದರು.

ಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಲಾ ಹಂತದಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯಡಿ ಬಿಸಿಯೂಟ, ಬಿಸಿ ಹಾಲು ಮತ್ತು ಪೌಷ್ಟಿಕ ಆಹಾರ, ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಣೆ ಸರ್ಕಾರ ನಿಗದಿಪಡಿಸಿದ ದರ, ಪ್ರಮಾಣದಲ್ಲಿ ನೀಡಬೇಕು. ಅಡುಗೆ ಕೋಣೆ, ತರಕಾರಿ, ಸಾಮಗ್ರಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಅಡುಗೆ ತಯಾರಿಕೆಯಲ್ಲಿ ಸುರಕ್ಷತಾ ಕ್ರಮ ಅನುಸರಿಸಬೇಕು ಎಂದರು.

ಅಕ್ಷರ ದಾಸೋಹ ತಾಲೂಕು ನಿರ್ದೇಶಕ ಎಫ್.ಎಂ.ಕಳ್ಳಿ ಮಾತನಾಡಿ, ತಾಲೂಕಿನ ಪ್ರತಿ ಶಾಲೆಯಲ್ಲಿ ಬಿಸಿಯೂಟವನ್ನು ಸ್ವಚ್ಛತೆಯಿಂದ ತಯಾರಿಸಬೇಕು. ಅಡುಗೆ ಕೋಣೆ, ಸಿಬ್ಬಂದಿ ವೈಯಕ್ತಿಕ ಸ್ವಚ್ಛತೆ, ಆಹಾರ ದಾಸ್ತಾನು ಸ್ವಚ್ಛತೆ ಕಾಯ್ದುಕೊಂಡು ಅಡುಗೆ ತಯಾರಿಸಿದಾಗ ಮಾತ್ರ ಮಕ್ಕಳಿಗೆ ಶುದ್ಧ, ಸುರಕ್ಷಿತ ಆಹಾರ ನೀಡಲು ಸಾಧ್ಯ ಎಂದು ಹೇಳಿದರು.

ಪ್ರಭಾರ ಬಿಇಒ ಅಶೋಕ ಗೌಡರ್, ಸಂಪನ್ಮೂಲ ವ್ಯಕ್ತಿಗಳಾದ ಶರಣಪ್ಪ ಕುರನಾಳ, ಮಂಜುನಾಥಯ್ಯ ತರಬೇತಿ ನೀಡಿದರು. ಪ್ರಧಾನ ಸಂಪನ್ಮೂಲ ವ್ಯಕ್ತಿಗಳಾದ ವೀರಪ್ಪ ಗಾಣಿಗೇರ, ಖಾದರ್ ಬಾದಶಾಹ, ದೇವೆಂದ್ರಪ್ಪ, ವೀರೇಶ ಅಂಗಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net