ಒಂದು ಲಕ್ಷ ರೂ. ಇಡುಗಂಟು ನೀಡಿ

Untitled design (2)
ಸಿಂಧನೂರಿನಲ್ಲಿ ಬಿಸಿಯೂಟ ಯೋಜನಾ ಎಡಿ ಸಾಬಣ್ಣಗೆ ಅಕ್ಷರದಾಸೋಹ ಬಿಸಿಯೂಟ ನೌಕರರ ಸಂಘದ ಸದಸ್ಯರು ಮನವಿ ಸಲ್ಲಿಸಿದರು. ಸಮಿತಿಯ ಜಿಲ್ಲಾಧ್ಯಕ್ಷ ರೇಣುಕಮ್ಮ, ತಾಲೂಕು ಅಧ್ಯಕ್ಷೆ ವಿಶಾಲಾಕ್ಷಿ, ಕಾರ್ಯದರ್ಶಿ ಶರಣಮ್ಮ ಪಾಟೀಲ್, ಶ್ರೀದೇವಿ ಸುಕಾಲಪೇಟೆ, ಅಂಜಿನಮ್ಮ ಬೂದಿವಾಳ ಇದ್ದರು.
Published on

ಸಿಂಧನೂರು: ಸರ್ಕಾರ ಬಿಸಿಯೂಟ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆಗೆ ನೀಡಲು ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ ತಾಲೂಕು ಸಮಿತಿ ನಗರದಲ್ಲಿ ಬಿಸಿಯೂಟ ಯೋಜನಾ ಎಡಿ ಸಾಬಣ್ಣಗೆ ಮಂಗಳವಾರ ಮನವಿ ಸಲ್ಲಿಸಿದರು.

ಬಾಕಿ ಹೆಚ್ಚುವರಿ ಗೌರವಧನ ನೀಡಿ

ಕೆಲಸ ಅವಧಿಯಲ್ಲಿ ಮರಣ ಹೊಂದಿದ ನೌಕರರಿಗೆ 25 ಲಕ್ಷ ರೂ. ಪರಿಹಾರ ನೀಡಬೇಕು. ನಿವೃತ್ತಿಯಾದ ನೌಕರರಿಗೆ 1 ಲಕ್ಷ ರೂ. ಇಡುಗಂಟು ನೀಡಬೇಕು. 2023ರ ಮಾ.31 ಕ್ಕೆ ಬಿಸಿಯೂಟ ನೌಕರರನ್ನು ಬಿಡುಗಡೆಗೊಳಿಸುವ ಆದೇಶ ಬದಲಾಯಿಸಿ, ಏ.10 2023 ಕ್ಕೆ ಮರು ಆದೇಶ ಮಾಡಬೇಕು. ಈ ಹಿಂದೆ ಬಜೆಟ್‌ನಲ್ಲಿ ಘೋಷಿಸಿದ 1 ಸಾವಿರ ರೂ. ಗೌರವ ಧನವನ್ನು ಜನವರಿ 2023 ರಿಂದ ಜಾರಿ ಮಾಡಬೇಕು. ಬಾಕಿ ಹೆಚ್ಚುವರಿ ಗೌರವಧನ ನೀಡಬೇಕೆಂದು ಒತ್ತಾಯಿಸಿದರು.

ಸಮಿತಿಯ ಜಿಲ್ಲಾಧ್ಯಕ್ಷ ರೇಣುಕಮ್ಮ, ತಾಲೂಕು ಅಧ್ಯಕ್ಷೆ ವಿಶಾಲಾಕ್ಷಿ, ಕಾರ್ಯದರ್ಶಿ ಶರಣಮ್ಮ ಪಾಟೀಲ್, ಶರಣಮ್ಮ ಜಿ., ವಿರುಪಾಕ್ಷಮ್ಮ, ಮಲ್ಲಮ್ಮ ಗಿಣಿವಾರ, ಶ್ರೀದೇವಿ ಸುಕಾಲಪೇಟೆ, ಅಂಜಿನಮ್ಮ ಬೂದಿವಾಳ, ಹನುಮಮ್ಮ, ಪುಷ್ಪಾ, ಶೇಕ್ಷಾಖಾದ್ರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net