ಹೊಸ ತಂತ್ರಾಂಶದಲ್ಲಿಲ್ಲ ತಿದ್ದುಪಡಿ! - ದ.ಕ.ಜಿಲ್ಲೆಯಲ್ಲಿ ಶೇ.೬೦ ಅರ್ಜಿ ತಿರಸ್ಕೃತ - ರೈತರಿಗೆ ಆರಂಭವಾಗಿದೆ ಆತಂಕ

PTR_26 MAY_1
Published on

ಅಕ್ರಮ ಸಕ್ರಮ ಸಮಿತಿ ರಚನೆಯಾಗಿ ವರ್ಷವಾಗುತ್ತಾ ಬಂದರೂ, ಕೃಷಿಕರಿಗೆ ಸರ್ಕಾರಿ ಭೂಮಿ ನೀಡುವ ಕಾರ್ಯ ಇನ್ನೂ ಆರಂಭವಾಗಿಲ್ಲ! ಇದಕ್ಕೆ ಕಾರಣ, ಅಕ್ರಮ-ಭ್ರಷ್ಟಾಚಾರ ತಡೆಗೆ ಕಂದಾಯ ಇಲಾಖೆ ಮಾಡಿರುವ ಹೊಸ ತಂತ್ರಜ್ಞಾನ. ರೈತರು ನೀಡಿದ ಮಾಹಿತಿಯಲ್ಲಿ ಸ್ಪಷ್ಟತೆ ಇಲ್ಲ ಎಂಬ ಕಾರಣಕ್ಕೆ ಅರ್ಜಿ ತಿರಸ್ಕೃತವಾಗುತ್ತಿದ್ದು, ರೈತರಲ್ಲಿ ಆತಂಕ ಎದುರಾಗಿದೆ.


ರೈತರು ತಮ್ಮ ಸುತ್ತಮುತ್ತಲಿನ ಸರ್ಕಾರಿ ಜಾಗದಲ್ಲಿ ಕೃಷಿ ಚಟುವಟಿಕೆ ಅಥವಾ ಸ್ವಾಽನ ಮಾಡಿ ವಿವಿಧ ನಮೂನೆಯಲ್ಲಿ ಅರ್ಜಿ ಸಲ್ಲಿಸುವ ಸಂದರ್ಭ ತಮಗೆ ತಿಳಿದ ಸರ್ವೇ ನಂಬರ್ ನಮೂದಿಸುತ್ತಾರೆ. ಹಳೆಯ ಈ ಸರ್ವೇ ನಂಬರ್ ಸರಿಯೇ? ಅಲ್ಲವೇ? ಎಂಬುದು ಈ ಹಿಂದೆ ಅಽಕಾರಿಗಳು ತನಿಖೆಗೆ ಬರುವ ಸಂದರ್ಭದಲ್ಲೇ ತಿಳಿಯುತ್ತಿತ್ತು. ಆದರೆ, ಹೊಸ ತಂತ್ರಜ್ಞಾನದಲ್ಲಿ ಅಽಕಾರಿಗಳು ತನಿಖೆಗೆ ಬರುವ ಸಂದರ್ಭ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಿಲ್ಲ. ಇದರಿಂದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ದ.ಕ.ಜಿಲ್ಲೆಯಲ್ಲಿ ಶೇ.೬೦ರಷ್ಟು ರೈತರು ಈ ಸಮಸ್ಯೆಗೆ ಒಳಗಾಗುತ್ತಿದ್ದು, ಉಳಿದವರಿಗೂ ಆತಂಕ ಶುರುವಾಗಿದೆ.


ಆಪ್ ತಂತ್ರಜ್ಞಾನದ ಮೂಲಕ ಜಾಗದ ಮೂಲೆ ಗುರುತಿಸುವ ಅನಿವಾರ್ಯತೆ ಇದೆ. ಬೆಟ್ಟ ಪ್ರದೇಶಗಳಿಂದ ಕೂಡಿದ ಭೂ ಪ್ರದೇಶದಲ್ಲಿ ಅಽಕಾರಿಗಳು ಈ ಕಾರ್ಯ ಮಾಡಲು ಪರಿತಪಿಸುತ್ತಿದ್ದಾರೆ. ಏರಿಳಿತ-ಹಳ್ಳಗಳಿಂದ ಕೂಡಿದ ಜಾಗದಲ್ಲಿ ಹೋಗಲು ಸಾಧ್ಯವಾಗದೆ, ಅರ್ಜಿ ವಿಲೇವಾರಿ ಮಾಡಲಾಗದ ಸ್ಥಿತಿ ಇದೆ. ಸರ್ವರ್ ಡಿಸ್ಕನೆಕ್ಟ್ ಆದರೆ ಆವರೆಗೆ ಅಪ್‌ಲೋಡ್ ಮಾಡಿದ್ದೆಲ್ಲವೂ ವ್ಯರ್ಥ.


ಕೆಲವು ಗ್ರಾಮಗಳಲ್ಲಿ ದೊಡ್ಡ ಭೂಪ್ರದೇಶವನ್ನು ಹೊಂದಿದ ಸರ್ವೇ ನಂಬರ್‌ಗಳನ್ನು ‘ಹಿಲ್ ಬ್ಲಾಕ್’ ಎಂದು ಗುರುತಿಸಿ ತಂತ್ರಾಂಶದಲ್ಲಿ ಸರ್ವೇಗೆ ಅವಕಾಶವನ್ನೇ ನೀಡಿಲ್ಲ. ರಾಜ್ಯದಲ್ಲಿ ಸರ್ಕಾರ ಅಽಕಾರಕ್ಕೆ ವರ್ಷವಾದರೂ, ಈವರೆಗೆ ಈ ಬಗ್ಗೆ ಚರ್ಚಿಸಲು ಒಂದು ಸಮಿತಿ ಸಭೆಯೂ ಆಗಿಲ್ಲ.

ಸ್ವಾತಂತ್ರ ಕ್ಕೂ ಮೊದಲೇ ಸ್ವಾಽನ!
ಕರಾವಳಿಯ ಕೆಲವು ರೈತರು ಸರ್ಕಾರಿ ಜಮೀನನ್ನು ಸ್ವಾತಂತ್ರ್ಯ ಪೂರ್ವದಲ್ಲೇ ಸ್ವಾಽನ ಮಾಡಿದ್ದರು. ಈ ಜಮೀನುಗಳನ್ನು ರೈತರು ತಮ್ಮ ಹೆಸರಿಗೆ ಮಾಡಿಕೊಳ್ಳಲು ಇಂದಿಗೂ ಅಲೆದಾಡುತ್ತಿದ್ದಾರೆ. ಕಾನೂನಿನ ನೆಪ ಹೇಳಿಕೊಂಡು ರೈತರಿಗೆ ಭೂಮಿ ನೀಡಲು ಅಽಕಾರಿಗಳು ಸತಾಯಿಸುತಲೇ ಇದ್ದಾರೆ. ಪಟ್ಟಣ, ನಗರ ಪ್ರದೇಶದಿಂದ ನಿರ್ದಿಷ್ಟ ಭೂಪ್ರದೇಶದವರೆಗೆ ಕೃಷಿ ಜಮೀನು ಮಂಜೂರಾತಿಗೆ ಅವಕಾಶ ಇಲ್ಲ ಎಂಬ ಕಾನೂನಿದೆ. ಇದರಿಂದ ಸಾವಿರಾರು ರೈತರ ಕಡತಗಳು ಮಂಜೂರಾಗುತ್ತಿಲ್ಲ. ಪಟ್ಟಣ ನಗರ ಆಗುವ ಮೊದಲು ಸಕ್ರಮಕ್ಕೆ ಸಲ್ಲಿಸಿದ ಅರ್ಜಿಯನ್ನಾದರೂ ಇತ್ಯರ್ಥಗೊಳಿಸಿ ಎಂಬುದು ರೈತರ ಕೋರಿಕೆ.

ಎಲ್ಲವೂ ಸರ್ಕಾರಿ!
ಕಂದಾಯ ಇಲಾಖೆ ಆಧಾರ್ ಸೀಡ್, ಲ್ಯಾಂಡ್ ಬೀಟ್, ಬಗರ್ ಹುಕುಂ ಮೊಬೈಲ್ ತಂತ್ರಾಂಶ ಜಾರಿಗೆ ತಂದಿದೆ. ಕೃಷಿಕರ ಸ್ವಾಽನ ಕೃಷಿ ಭೂಮಿಯ ಅಕ್ರಮ-ಸಕ್ರಮಕ್ಕೆ ಅರ್ಜಿಯನ್ನು ಪಟ್ಟಣ ಪಂಚಾಯಿತಿ ಹಾಗೂ ನಗರ ವ್ಯಾಪ್ತಿಯ ನಿಯಮ ಬಳಸಿಕೊಂಡು ತಿರಸ್ಕಾರ ಮಾಡುವುದಕ್ಕೆ ಆದೇಶವಾಗಿದೆ. ಇದರ ಜತೆಗೆ ಕುಮ್ಕಿ ಜಾಗವನ್ನು ಸರ್ಕಾರಿ ಜಾಗವೆಂದು ಸರ್ಕಾರ ವಶಕ್ಕೆ ಪಡೆಯಲು ಹೊಸ ಲ್ಯಾಂಡ್ ಬೀಟ್ ತಂತ್ರಾಂಶವನ್ನು ಜಾರಿಗೆ ತರಲಾಗಿದೆ. ಈ ಮೂಲಕ ರೈತರು ತಮ್ಮ ಸುರ್ಪಯಲ್ಲಿ ಇಟ್ಟಿರುವ ಜಾಗವೂ ಬೇರೆಯವರ ಪಾಲಾಗಲಿದೆ ಎಂಬ ಆತಂಕ ಎದುರಾಗಿದೆ.

ತಂತ್ರಾಂಶದಲ್ಲಿರುವ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಪಪಂ ಘೋಷಣೆ ಮೊದಲು ಅರ್ಜಿಸಲ್ಲಿಸಿದ ರೈತರಿಗೆ ಆಗುತ್ತಿರುವ ಸಮಸ್ಯೆಗೆ ಏನು ಮಾಡಬಹುದೆಂಬುದನ್ನು ನೋಡುತ್ತೇವೆ. ಕುಮ್ಕಿ ಮಾಲೀಕತ್ವ ರೈತರಿಗೆ ಹೋಗುವುದಿಲ್ಲ, ಹಾಗೆಂದು ಅವರಿಗೆ ಅದರ ಹಕ್ಕು ರೈತರಿಗೆ ಇರುತ್ತದೆ. ಕುಮ್ಕಿಯನ್ನು ಸರ್ಕಾರಿ ಜಾಗ ಮಾಡಬೇಕೆಂಬ ವಿಚಾರ ಇಲ್ಲ. ಈ ಬಗ್ಗೆ ಜಿಲ್ಲಾಽಕಾರಿಗಳಿಂದ ವರದಿ ತರಿಸಿಕೊಳ್ಳಲಾಗುವುದು.
| ರಾಜೇಂದ್ರ ಕುಮಾರ್ ಕಟಾರಿಯಾ
ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ

ಕುಮ್ಕಿ ರೈತರ ಹಕ್ಕು. ಸರ್ಕಾರ ಇದನ್ನು ಮುಚ್ಚುವಂತಿಲ್ಲ. ಅಕ್ರಮ-ಸಕ್ರಮ ಅರ್ಜಿ ಹೆಸರಿನಲ್ಲಿ ಹಣ ವಸೂಲಿ ಮಾಡಿದ ಅಽಕಾರಿಗಳು ಈಗ ಜಮೀನನ್ನೂ ವಶಕ್ಕೆ ಪಡೆಯಲು ಮುಂದಾಗಿರುವುದು ಸರಿಯಲ್ಲ. ರೈತರ ಸ್ವಾನದಲ್ಲಿರುವ ಜಮೀನನ್ನು ಸರ್ಕಾರಿ ಎಂದು ಘೋಷಣೆ ಮಾಡುವ ವಿಚಾರದಲ್ಲಿ ಕಂದಾಯ ಸಚಿವರು ಉತ್ತರ ನೀಡಬೇಕು. ಹಿಂದಿನ ಸರ್ಕಾರ ಅನುಸರಿಸಿದ ದಮನಕಾರಿ ನೀತಿಯನ್ನು ಈ ಸರ್ಕಾರವೂ ಮುಂದುವರಿಸಿದರೆ, ರಾಜ್ಯಾದ್ಯಂತ ರೈತ ಸಂಘ ಹೋರಾಟ ಮಾಡಲಿದೆ.
| ಶ್ರೀಧರ ಶೆಟ್ಟಿ ಬೈಲುಗುತ್ತು
ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ದ.ಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net