

ಪ್ರತ್ಯೇಕ ಪ್ರಕರಣ
| ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದ ೯ ಜನರು ವಶಕ್ಕೆ
ಬೆಳಗಾವಿ: ನಗರದಲ್ಲಿ ನಡೆದ ೬ ಪ್ರತ್ಯೇಕ ಪ್ರಕರಣದಲ್ಲಿ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದ ೯ ಜನ ಆರೋಪಿಗಳನ್ನು ನಗರ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.
ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯ ಹುದಲಿ ಗ್ರಾಮದಲ್ಲಿನ ಅಕ್ರಮ ಸಾರಾಯಿ ಮಾರಾಟದ ಅಡ್ಡೆಯ ಮೇಲೆ ದಾಳಿ ನಡೆಸಿದ ಪೋಲಿಸರು ಸಾರಾಯಿ ಮಾರಾಟದಲ್ಲಿ ತೊಡಗಿದ್ದ ಬಸವರಾಜ ನಾಗಪ್ಪ ಕೊಂತಿ(೫೦),ಹಾಗೂ ಮುತಗಾ ಗ್ರಾಮದಲ್ಲಿ ಸಾಗರ ಬಾವುಕನ್ನಾ ಪಾಟೀಲ(೩೫), ಈರಣ್ಣ ಬಸಪ್ಪ ಪೈರಾಸಿ(೪೩) ,ಹಾಗೂ ಗಾಂಜಾ ಸೇವಿಸಿದ್ದ ಮಹೇಶ ರಾಜು ಮುತಗೇಕರ, ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮಾರಾಕಾಸ್ತç ಹೊಂದಿದ್ದ ನಾಗರಾಜ ಬಸವಣ್ಣಿ ನಾಯಕ(೨೭), ನಾಗರಾಜ ಬಸವರಾಜ ಜಂಗಳಿ(೩೦), ಸೋಹೇಲ್ ಸರದಾರಸಾಬ ಮೋಕಾಶಿ(೨೫), ಭೂಷಣ ನಾಗೇಂದ್ರ ಪಾಟೀಲ (೨೧), ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶ್ರೀಧರ ಈರಪ್ಪ ಶೀಗಿಹಳ್ಳಿ ಎಂಬುವವರನ್ನು ಪೊಲೀಸ್‌ರು ವಶಕ್ಕೆ ಪಡೆದಿದ್ದಾರೆ .