

ಕುಂಬಳೆ: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಕಾಸರಗೋಡು ಜಿಲ್ಲಾ ಸಮ್ಮೇಳನದ ಸ್ವಾಗತ ಸಮಿತಿ ರೂಪೀಕರಣ ಸಭೆ ಕುಂಬಳೆ ಪೈ ಕಾಂಪ್ಲೆಕ್ಸ್‌ನಲ್ಲಿ ಶುಕ್ರವಾರ ಜರುಗಿತು.
ಎಕೆಪಿಎ ಜಿಲ್ಲಾ ಅಧ್ಯಕ್ಷ ಕೆ.ಸಿ.ಅಬ್ರಹಾಂ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಾಂತ್ವನ ಸಮಿತಿ ಸಂಚಾಲಕ ಪ್ರಜೀಶ್ ಮಣಿ ಉದ್ಘಾಟಿಸಿದರು. ನವಂಬರ್ 22ರಂದು ಕುಂಬಳೆಯಲ್ಲಿ ಎಕೆಪಿಎ ಕಾಸರಗೋಡು ಜಿಲ್ಲಾ ಸಮ್ಮೇಳನ ನಡೆಸುವುದು ಎಂದು ತೀರ್ಮಾನಿಸಲಾಯಿತು.
ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು, ಜಿಲ್ಲಾ ಉಪಾಧ್ಯಕ್ಷ ವೇಣು ವಿ.ವಿ., ರಾಜ್ಯ ಸಮಿತಿಯ ಪ್ರಶಾಂತ್ ತೈಕಡಪ್ಪುರಂ, ಜಿಲ್ಲಾ ಸಹಕಾರ್ಯದರ್ಶಿ ಅನೂಪ್ ಚಂದೇರ, ಅಶೋಕನ್ ಪೊಯಿನಾಚಿ, ಸುಧೀರ್, ವಿಜಯನ್ ಶೃಂಗಾರ್, ಸನ್ನಿ ಜೇಕಬ್, ಸುಕು ಸ್ಮಾರ್ಟ್, ರಾಜೇಂದ್ರನ್, ವಾಸು ಎ., ಎನ್.ಎ.ಭರತನ್, ಜನಾರ್ದನನ್, ಸುನೀಲ್ ಕುಮಾರ್ ಶುಭಹಾರೈಸಿದರು. ಜಿಲ್ಲಾ ಕಾರ್ಯದರ್ಶಿ ಸುಗುಣನ್ ಇರಿಯ ಸ್ವಾಗತಿಸಿದರು.
ಕೋಶಾಧಿಕಾರಿ ಸುನೀಲ್ ಕುಮಾರ್ ಪಿ.ಟಿ. ವಂದಿಸಿದರು. ನಾರಾಯಣ ಓಡಂಗಲ್ಲು ಪ್ರಾರ್ಥಿಸಿದರು. ಜಿಲ್ಲೆಯ ವಿವಿಧ ವಲಯಗಳ ಸದಸ್ಯರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.