ಅಕ್ಕಿಆಲೂರ ಅರ್ಬನ್ ಬ್ಯಾಂಕ್‌ಗೆ ಆಯ್ಕೆ

21-akialur-vss
Published on

ಅಕ್ಕಿಆಲೂರ: ಸ್ಥಳೀಯ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ 12 ನಿರ್ದೇಶಕರು ಮತದಾನ ಮೂಲಕ ಹಾಗೂ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಮೀಸಲಾತಿಯಲ್ಲಿ ಸ್ಪರ್ಧಿಸಿದ್ದ ಷಣ್ಮುಖಪ್ಪ ಮುಚ್ಚಂಡಿ, ಸಿದ್ರಾಮಪ್ಪ ವಿರುಪಣ್ಣನವರ, ವಿರಭದ್ರಪ್ಪ ಉಪ್ಪಿನ, ಮಲ್ಲಿಕಾರ್ಜನಪ್ಪ ಕಂಬಾಳಿ, ತೋಟಪ್ಪ ತುಪ್ಪದ, ಶಶಿಕಲಾ ಕೂಬಿಹಾಳ, ಕೊಟ್ಟೂರಬಸಪ್ಪ ಬೆಲ್ಲದ, ಹಿಂದುಳಿದ ಅ ವರ್ಗದಿಂದ ಜಗನ್ನಾಥ ಬಾಬಜಿ, ಹಿಂದುಳಿದ ಬ ವರ್ಗದಿಂದ ಬಸವರಾಜ ಕೋರಿ, ಪರಿಶಿಷ್ಟ ಜಾತಿಯಿಂದ ಬಾನಪ್ಪ ಲಮಾಣಿ, ಮಹಿಳಾ ಮೀಸಲಾತಿಯಿಂದ ಸ್ಪರ್ಧಿಸಿದ್ದ ವಿದ್ಯಾ ಮಿರ್ಜಿ, ಸುಜಾತಾ ಪಸಾರದ ಆಯ್ಕೆಯಾದರೆ, ಕವಿತಾ ಕನ್ನೇಶ್ವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಹಾನಗಲ್ಲ ತಾಲೂಕು ಸಹಾಕಾರಿ ಅಭಿವೃದ್ಧಿ ಅಧಿಕಾರಿ ಬಿ. ಪುಷ್ಪಾವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net