ಮಕ್ಕಳ ಏಳಿಗೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖ

16-akr-1
Published on

ಅಕ್ಕಿಆಲೂರ: ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ವೃದ್ಧಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಕೂಡಲದ ಗುರುನಂಜುಂಡೇಶ್ವರಮಠದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಜ್ಞಾನಭಾರತಿ ಶಾಲೆಯಲ್ಲಿ ರಾಜ್ಯ ಅನುದಾನಿತ ಪ್ರಾಥಮಿಕ ಶಾಲೆಗಳ ಶಿಕ್ಷಕರ ಸಂಘದಿಂದ ಶನಿವಾರ ಆಯೋಜಿಸಿದ್ದ ಶಿಕ್ಷಕರ ದಿನೋತ್ಸವ ಸಮಾರಂಭದಲ್ಲಿ ಶ್ರೀಗಳು ಮಾತನಾಡಿದರು.
ಜಗತ್ತಿನ ಎಲ್ಲ ರಾಷ್ಟ್ರಗಳು ಭಾರತದ ಆರ್ಥಿಕ ನೀತಿ, ವಿಜ್ಞಾನ, ತಂತ್ರಜ್ಞಾನ ಮತ್ತು ರಾಜನೀತಿಯ ಕುರಿತು ಶ್ಲಾಘಿಸುತ್ತಿವೆ. ಪ್ರಾಚೀನ ಕಾಲದಿಂದಲೂ ಭಾರತದ ಗುರುಕುಲ ಶಿಕ್ಷಣ ಹೆಸರುವಾಸಿಯಾಗಿದೆ. ಬದುಕುವ ಕಲೆ, ಸಾಮರ್ಥ್ಯ, ಆತ್ಮವಿಶ್ವಾಸ ಮತ್ತು ಸಮಾಜ ಸೇವೆಯ ನೈತಿಕ ಶಿಕ್ಷಣ ಪಾಠವನ್ನು ಗುರುಕುಲಗಳಲ್ಲಿ ಬೋಧಿಸಲಾಗುತ್ತಿತ್ತು. ಆದರೆ, ಮೆಕಾಲೆ ಶಿಕ್ಷಣದಿಂದ ಎಲ್ಲವೂ ವ್ಯವಹಾರವಾಗಿದ್ದ ಶೈಕ್ಷಣಿಕ ವ್ಯವಸ್ಥೆ ಈಗ ಮತ್ತೆ ಬದಲಾಗುತ್ತಿದೆ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪುರ, ಹೇರೂರ ಗುಬ್ಬಿನಂಜುಂಡೇಶ್ವರಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಸಂತೋಷ ದೊಡ್ಡಮನಿ, ಲಕ್ಷ್ಮಣ ಶೇಷಗಿರಿ, ರಾಜಶೇಖರ ಕಟ್ಟೆಗೌಡರ, ಸುನಿತಾ ನಾಯ್ಕ, ಲಕ್ಷ್ಮೀ ಭಟ್, ವಿ.ಎಂ. ಕಬ್ಬಿಣಕಂತಿಮಠ, ಮೌನೇಶ ಯಾದವ, ವಿ.ಈ. ಮೂಡಿಮಠ, ಜೆ.ಎಂ. ಅಂಗಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net