ಬೆಳೆ ಹಾನಿ, ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆ

13-AKR FARMER SUCUDE
Published on

ಅಕ್ಕಿಆಲೂರ: ಧರ್ವ ನದಿ ಪಾತ್ರದಲ್ಲಿರುವ ಹೊಲದಲ್ಲಿ ಅಧಿಕ ನೀರು ನುಗ್ಗಿದ್ದರಿಂದ ಮತ್ತು ತೀವ್ರ ಮಳೆಯಿಂದ ಬೆಳೆಗಳು ನಾಶವಾದ ಹಿನ್ನೆಲೆಯಲ್ಲಿ ಸಮೀಪದ ಮಾರಂಬೀಡ ಗ್ರಾಮದಲ್ಲಿ ರೈತನೊಬ್ಬ ಸೋಮವಾರ ತಡರಾತ್ರಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶಂಕರಪ್ಪ ಕುಂದಗೋಳ (70) ಆತ್ಮಹತ್ಯೆ ಮಾಡಿಕೊಂಡ ರೈತ. ಮಾರಂಬೀಡ ಗ್ರಾಮದ ಹೊರವಲಯದಲ್ಲಿ ಹರಿದಿರುವ ಧರ್ವನದಿ ಪಾತ್ರದಲ್ಲಿದ್ದ ತನ್ನ 3 ಎಕರೆ ಹೊಲದಲ್ಲಿ ಸೋಯಾಬೀನ್, ಗೋವಿನಜೋಳ, ಶೇಂಗಾ ಮತ್ತು ಹತ್ತಿ ಬೆಳೆ ಬೆಳೆದಿದ್ದ. ಹೊಲದಲ್ಲಿ ನೀರು ನಿಂತು ಬೆಳೆಗಳು ಹಾನಿಯಾಗಿದ್ದವು. ಕೃಷಿಗಾಗಿ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸುಮಾರು 4 ಲಕ್ಷ ರೂ., ಸ್ಥಳೀಯ ಸೊಸೈಟಿಯಲ್ಲಿ 70 ಸಾವಿರ ರೂ, ಸಾಲ ಮಾಡಿದ್ದ. ಸಾಲ ಮರುಪಾವತಿ ಹೇಗೆ ಮಾಡುವುದು ಎಂದು ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿನೆ ಎನ್ನಲಾಗಿದೆ. ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net