ಮಲಗುಂದದಲ್ಲಿ ವಿದ್ಯುತ್ ಸ್ಪರ್ಶಿಸಿ ರೈತ ಸಾವು

2-AKR-FARMER DEATH
Published on

ಅಕ್ಕಿಆಲೂರ: ಹೊಲದಲ್ಲಿನ ಬೋರ್‌ವೆಲ್ ಆರಂಭಿಸುವಾಗ ವಿದ್ಯುತ್ ಸ್ಪರ್ಶಿಸಿ ರೈತ ಮೃತಪಟ್ಟ ಘಟನೆ ಸಮೀಪದ ಮಲಗುಂದ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ. ಸಿದ್ದಪ್ಪ ಫಕೀರಪ್ಪ ಹುಲಗಕ್ಕನವರ (37) ಮೃತಪಟ್ಟ ರೈತ. ಮಲಗುಂದ ಗ್ರಾಮದಿಂದ ಕನ್ನೇಶ್ವರಕ್ಕೆ ಸಂಪರ್ಕ ಕಲ್ಪಿಸುವ ಒಳರಸ್ತೆಯಲ್ಲಿ ವರದಾನದಿ ಪಾತ್ರದಲ್ಲಿದ್ದ ಹೊಲದಲ್ಲಿ ಭತ್ತ ಬೆಳೆದಿದ್ದ ರೈತ ಸಿದ್ದಪ್ಪ ಸೋಮವಾರ ಬೆಳಗ್ಗೆ ನೀರು ಹಾಯಿಸಲು ಬೋರ್‌ವೆಲ್ ಆರಂಭಿಸುವಾಗ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ರೈತನಿಗೆ ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಇದ್ದಾನೆ. ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net