

ವಿಜಯವಾಣಿ ಸುದ್ದಿಜಾಲ ಗದಗ
ಮಾನವನ ಜೀವನದ ಉನ್ನತಿಗೆ ಸತ್ಸಂಗ ಅವಶ್ಯವಿದೆ. ಅಜ್ಞಾನಿಗಳ ಜೊತೆ ಸತ್ಸಂಗ ಮಾಡಿದಾಗ ಜೀವನ ವ್ಯರ್ಥವಾಗುತ್ತದೆ. ಜ್ಞಾನಿಗಳ ಜೊತೆ ಸಂಗ ಮಾಡಿದಾಗ ಜ್ಞಾನದ ಅರಿವನ್ನು ಪಡೆಯಬಹುದು ಎಂದು ಶಾಂತವೀರ ಶರಣರು ಹೇಳಿದರು.
ಅಕ್ಕನ ಬಳಗದಲ್ಲಿ ಮಂಗಳವಾರ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಶರಣರ ಸಂಗದಿಂದ ತನುವಿನ ದೋಷ, ಮನಸ್ಸಿನ ದೋಷಗಳನ್ನು ಕಳೆದುಕೊಳ್ಳಬಹುದು. ಅಕ್ಕಮಹಾದೇವಿಯ ವಚನಗಳಲ್ಲಿ ಇಂತಹ ದೋಷಗಳನ್ನು ನಿವಾರಿಸುವುದನ್ನು ಕಾಣುತ್ತೇವೆ. ಮನುಷ್ಯನ ಜನ್ಮದ ಸಾರ್ಥಕತೆ ಗುರುವಿನಿಂದ ಮಾತ್ರ ಸಿಗಲು ಸಾಧ್ಯ. ನಮ್ಮ ಅವಗುಣಗಳನ್ನು ಕಳೆದು, ಜೀವನದಲ್ಲಿ ಬೆಳಕು ನೀಡುವ ಶಕ್ತಿ ಗುರುವಿಗಿದೆ ಮತ್ತು ವಚನಗಳಲ್ಲಿ ಇದೆ. ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಸಂಪಾದನೆಯ ಒಂದು ಭಾಗವನ್ನು ಒಳ್ಳೆಯ ಕಾರ್ಯಗಳಿಗೆ ದಾನ ಮಾಡಬೇಕು. ಅದರಿಂದ ಇಮ್ಮಡಿಯಾದ ಲವು ಸಿಗುತ್ತದೆ ಎಂದು ಶರಣರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರೋಜಿನಿ ಹಕ್ಕಾಪಕ್ಕಿ, ಕಲಾವತಿ ಪಟ್ಟಣಶೆಟ್ಟಿ, ಲಲಿತಾ ಬಾಳಿಹಳ್ಳಿಮಠ, ಜಯಲಕ್ಷಿ$್ಮ ಬಳ್ಳಾರಿ, ರೇಣುಕಾ ಅಮಾತ್ಯ, ನಾಗರತ್ನ ಹುಬ್ಬಳಿಮಠ, ಜಯಶ್ರೀ ಪಾಟೀಲ, ಶಿವಲೀಲಾ ಕುರುಡಗಿ, ಗಿರಿಜಾ ನಾಲ್ವತವಾಡಮಠ, ಶೈಲಾ ಕವಲೂರ ಹಲವರು ಇದ್ದರು.