ಅಕ್ಕಮಹಾದೇವಿ ತತ್ತ್ವ, ಸಿದ್ಧಾಂತ ಅನುಕರಣೀಯ

12GKK1
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 5767168;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42;
Published on

ಗೋಕಾಕ: ಅಕ್ಕಮಹಾದೇವಿಯ ಬದುಕು, ಬರಹ ಮಾನವಕುಲಕ್ಕೆ ದಾರಿದೀಪವಾಗಿದೆ. ಹೀಗಾಗಿ, ಶಿವಶರಣೆಯ ತತ್ತ್ವ, ಸಿದ್ಧಾಂತ ಅನುಕರಣೀಯ ಎಂದು ಝಾಂಗಟಿಹಾಳ ಯಲ್ಲಾಲೀಂಗೇಶ್ವರ ಮಠದ ಶಿವಶರಣೆ ಸಂಗಮ್ಮ ತಾಯಿ ಹೇಳಿದರು.

ನಗರದ ಶ್ರೀ ಶೂನ್ಯ ಸಂಪಾದನ ಮಠದಲ್ಲಿ ಸ್ಥಳೀಯ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆ ಹಾಗೂ ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 185ನೇ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿ ನಡುವಿನ ಸಂವಾದ ಆಧ್ಯಾತ್ಮ ಜಗತ್ತಿನಲ್ಲಿ ಅಮರವಾಗಿದೆ. ಅಕ್ಕಮಹಾದೇವಿ ವಚನಗಳು ಬದುಕನ್ನು ಹಸನಗೊಳಿಸುತ್ತವೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ ಕೊಡಿಸಲು ಶ್ರಮಿಸಿದ್ದ ಅಕ್ಕಮಹಾದೇವಿ ಸೀವಾದಿ ಚಳವಳಿಯ ಪ್ರತಿಪಾದಕಿಯಾಗಿದ್ದರು ಎಂದರು.

ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಬಸನಗೌಡ ಪಾಟೀಲ, ಲಿಂಗಾಯತ ಮಹಿಳಾ ವೇದಿಕೆ ಅಧ್ಯಕ್ಷೆ ಭಾರತಿ ಮರೆನ್ನವರ, ಶಕುಂತಲಾ ಕಟ್ಟಿ, ಸಿ.ಎಸ್.ಮೆಣಸಿನಕಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net