ಅಕ್ಕಮಹಾದೇವಿ ಬದುಕು ನಮಗೆ ಮಾದರಿ

Akkamahadevi's life is a model for us
Published on

ನರಗುಂದ: ವೈರಾಗ್ಯಮೂರ್ತಿ ಅಕ್ಕಮಹಾದೇವಿಯ ಆದರ್ಶ ಬದುಕು ನಮಗೆಲ್ಲ ಮಾದರಿಯಾಗಬೇಕು. ಆಧ್ಯಾತ್ಮಿಕ ಬದುಕು ಎನ್ನುವುದು ಬಹು ಎತ್ತರಕ್ಕೆ ಬೆಳೆದಿದೆ. ನಾವೆಲ್ಲ ಶಾಂತಿ, ಸಂಯಮದಿಂದ ಜೀವನ ನಡೆಸುವ ಮೂಲಕ ಜಂಜಾಟದಿಂದ ಹೊರಬರಬೇಕು ಎಂದು ಈಶ್ವರೀಯ ವಿಶ್ವದ್ಯಾಲಯದ ಸಂಚಾಲಕಿ ಪ್ರಭಕ್ಕ ಹೇಳಿದರು.

ಪಟ್ಟಣದ ಈಶ್ವರೀಯ ವಿಶ್ವದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಗದಂಬಾ ಸರಸ್ವತಿ ಮಮ್ಮಾರವರ ಸ್ಮತಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಈಶ್ವರಿ ವಿದ್ಯಾಲಯ ನಿತ್ಯ ಆಧಾತ್ಮದ ಬದುಕು ಕಲಿಸಿಕೊಡುವ ಪ್ರಮುಖ ಕೇಂದ್ರಗಳಾಗಿವೆ. 1936ರಲ್ಲಿ ಈಶ್ವರೀಯ ವಿಶ್ವದ್ಯಾಲಯ ಸ್ಥಾಪನೆಗೊಂಡಿತು. ಬಾಬಾ ಲೇಖರಾಜರವರು ತಮ್ಮ ಕೊನೆಯ ದಿನಗಳಲ್ಲಿ ಜಗದಂಬಾ ಸರಸ್ವತಿಯವರೆಗೆ ಈಶ್ವರೀಯ ವಿಶ್ವದ್ಯಾಲಯಗಳ ಆಡಳಿತ ನಿರ್ವಹಣೆ ನೀಡಿದರು. ಈಶ್ವರೀಯ ವಿಶ್ವದ್ಯಾಲಯ ಕಳೆದ 88 ವರ್ಷಗಳಿಂದ ಆಧ್ಯಾತ್ಮದ ಮಹತ್ವ ತಿಳಿಸಿಕೊಡುತ್ತಿದೆ. ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದ 142 ಕಡೆಗಳಲ್ಲಿ ಈಶ್ವರೀಯ ವಿಶ್ವದ್ಯಾಲಯಗಳು ಆಧ್ಯಾತ್ಮಿಕ ಸೇವೆ ಸಲ್ಲಿಸುತ್ತಿವೆ ಎಂದರು.

ಪ್ರತಿ ವರ್ಷ ಶ್ರೀಶೈಲಕ್ಕೆ ಪಾದಯಾತ್ರೆ ತೆರಳುವ ಭಕ್ತರಿಗೆ ವಿವಿಧ ಸೇವಾ ಕಾರ್ಯ ಕೈಗೊಳ್ಳುವ ನರಗುಂದ ತಾಲೂಕಿನ ಕೊಣ್ಣೂರಿನ ಶ್ರೀ ಬಸವೇಶ್ವರ ಸೇವಾ ಸಮತಿ ಸದಸ್ಯರು, ಪಟ್ಟಣದ ವರ್ತಕರನ್ನು ಸನ್ಮಾನಿಸಲಾಯಿತು.

ಭೀಮಪ್ಪ ಕಿತ್ಲಿ, ಶಿವಾನಂದ ಕರಿಯಪ್ಪನವರ. ಎನ್.ಟಿ. ಕೆಂಪನಗೌಡ್ರ, ಬಸವರಾಜ ಬ್ಯಾಳಿ, ಅನಂತ ವಡಗಡಗಿ. ಅಶೋಕ ಮಂಗನಹಳ್ಳಿ, ಈಶ್ವರಗೌಡ ಸಿರಿಯಪ್ಪಗೌಡ್ರ, ಕುರುಗೋಡಯ್ಯ ಹಿರೇಮಠ, ಚನ್ನಯ್ಯ ಪರ್ವತದೇವರಮಠ, ಬಸವ್ವ ಕರಿಯಪ್ಪನವರ, ಮಹಂತೇಶ ಶಲವಡಿ, ಮಲ್ಲಯ್ಯ ಪರ್ವತದೇವರಮಠ, ಮಂಜುನಾಥ ಕಲಹಾಳ, ಈಶ್ವರ ಮುಗಳಿ, ಕೆ.ಜಿ. ಹಿರೇಮಠ, ಲಚ್ಚಪ್ಪ ಮರ್ಚಕ್ಕನವರ, ಸಿದ್ದಪ್ಪ ಗಾಣಿಗೇರ, ಬಸವರಾಜ ಯಲಿಗಾರ, ಅಶೋಕ ಯಲಿ, ಶಂಕ್ರಣ್ಣ ಇಂಗಳಳ್ಳಿ, ಬಸವರಾಜ ಚೌಡರಡ್ಡಿ, ಬಸವರಾಜ ಬ್ಯಾಳಿ, ಹನುಮಂತ ಶೆಟ್ಟಿ, ಹನುಮಂತ ವಡವಡಗಿ, ತಿಮ್ಮಣ್ಣ ಆನೆಗುಂದಿ, ರಾಮು ಬಿಜಾಪೂರ, ದೇವಪ್ಪ ಜಾವೂರ ಹಾಗೂ ಈಶ್ವರಿ ಪರಿವಾರದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net