ಪ್ರವಚನಗಳಿಂದ ಶರಣ ಧರ್ಮ ಸಂಸ್ಕಾರದ ತಿಳಿವಳಿಕೆ

3 Dwd 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳು ಹಾಗೂ ಯುವಕರಲ್ಲಿ ಶರಣ ಧರ್ಮ ಸಂಸ್ಕಾರದ ತಿಳಿವಳಿಕೆ ಮೂಡಿಸಲು ಪ್ರವಚನಗಳು ಸಹಕಾರಿ ಎಂದು ಉಪ್ಪಿನಬೆಟಗೇರಿ ವಿರಕ್ತ ಮಠದ ಶ್ರೀ ವಿರೂಪಾಕ್ಷ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಏರ್ಪಡಿಸಿದ್ದ `ಅಕ್ಕಮಹಾದೇವಿ ಜೀವನ ದರ್ಶನ' ಪ್ರವಚನ ಮಂಗಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಬಸವಾದಿ ಶರಣರ ಚಿಂತನ, ಅನುಭಾವ, ಪ್ರವಚನಗಳು ಆತ್ಮ ಪರಮಾನಂದವಾಗುವAತೆ ಮಾಡುತ್ತವೆ. ಶರಣ ಸಾಹಿತ್ಯದ ಸಾತ್ವಿಕ ಸದ್ವಿಚಾರ ಮಾರ್ಗದ ಗುಣಗಳನ್ನು ಪ್ರಸಾರ ಮಾಡುತ್ತಿದ್ದರೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಪ್ರವಚನದ ವಿಚಾರ ಧಾರೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ ಎಂದರು.
ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ಸಮ್ಮುಖ ವಹಿಸಿ ಮಾತನಾಡಿ, ಮಾನವೀಯತೆಗೆ ಮಹತ್ವ ನೀಡಿದ್ದ ಅಕ್ಕಮಹಾದೇವಿ ಜನಮನ ಪರಿವರ್ತನೆಯ ಸಲುವಾಗಿ ವಚನಗಳನ್ನು ರಚಿಸಿದರೆ ಹೊರತು ಸ್ವಾರ್ಥಕ್ಕಲ್ಲ. ತಾಯಿ ಮಗುವನ್ನು ಪೋಷಿಸಿ ಬೆಳೆಸಿ ಯೋಗ್ಯ ಮನುಷ್ಯನನ್ನಾಗಿ ಮಾಡುವ ಹಾಗೆ ಭಕ್ತರ ಜೀವನದ ಭಾವಗಳಲ್ಲಿ ಕ್ರಿಯಾ ಜ್ಞಾನ ಭಾವ ರೂಪದಿಂದ ಲಿಂಗಸ್ವರೂಪಗೊಳಿಸುವ ಕೆಲಸ ಮಠಾಽÃಶರದ್ದಾಗಿದೆ ಎಂದರು.
ಶ್ರೀ ಉಳವಿ ಬಸವೇಶ್ವರ ಧರ್ಮ ಫಂಡ ಸಂಸ್ಥೆ ಅಧ್ಯಕ್ಷ ಡಾ. ಎಸ್.ಆರ್. ರಾಮನಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿತ್ಯವೂ ಬಸವಾದಿ ಶರಣರ ವಚನ ಪಠಣ ಮಾಡಿದರೆ ಬದುಕು ಸಾರ್ಥಕಗುತ್ತದೆ ಎಂದರು.
ಸಮಾರAಭದಲ್ಲಿ ಮಾತೆ ಬಸವೇಶ್ವರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net