

ಗೋಕಾಕ:ಶಿವಶರಣೆ ಅಕ್ಕಮಹಾದೇವಿ ಅವರ ತತ್ತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಸಂಸ್ಕಾರವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ ಎಂದು ವೀಣಾ ಸವಣೂರ ಹೇಳಿದರು.
ನಗರದ ಬಸವ ಮಂದಿರದಲ್ಲಿ ತಾಲೂಕು ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಮಹಿಳಾ ಘಟಕದಿಂದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿವಶರಣೆ ಅಕ್ಕಮಹಾದೇವಿ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 12ನೇ ಶತಮಾನದಲ್ಲಿ ಶರಣರು ಅನುಭವ ಮಂಟಪ ಸ್ಥಾಪಿಸಿ ಮಹಿಳಾ ಸ್ವಾತಂತ್ರ ನೀಡಿದ್ದಾರೆ. ಹೀಗಾಗಿ, ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಉನ್ನತ ಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳೆಯರು ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದರು.
ಮುಖಂಡ ಡಾ.ದಯಾನಂದ ನೂಲಿ, ಇಷ್ಟಲಿಂಗ ಪೂಜೆ ಹಾಗೂ ಮಹತ್ವ ಕುರಿತಾಗಿ ತಿಳಿಸಿದರು. ಐ.ಆರ್.ಮಠಪತಿ, ಸಂಘದ ಅಧ್ಯಕ್ಷೆ ಮಹಾದೇವಿ ಉಪ್ಪಿನ, ಉಪಾಧ್ಯಕ್ಷೆ ದೀಪಾ ಬೆಲ್ಲದ, ಕಾರ್ಯದರ್ಶಿ ಹರ್ಷಿತಾ ಸವಣೂರ ಇದ್ದರು.