

ನಾಲತವಾಡ: ಅಕ್ಕಮಹಾದೇವಿ ಕೇವಲ ಮಹಿಳೆಯರಿಗೆ ಮಾತ್ರವಲ್ಲದೆ ಇಡಿ ಮಾನವ ಕುಲಕ್ಕೆ ಮಾದರಿಯಾಗಿದ್ದಾರೆ ಎಂದು ಶರಣ ಸಾಹಿತಿ ಬಸವರಾಜ ಪೂಜಾರಿ ಹೇಳಿದರು.
ನಾಲತವಾಡ ಬಸವ ಕೇಂದ್ರದ ಸಹಯೋಗದೊಂದಿಗೆ ರಡ್ಡೆರ ಪೇಟೆಯ ನರಸಪ್ಪಗೌಡ ಚಿತ್ತರನಾಳ ಅವರ ಮನೆಯಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತಿ ಹಿನ್ನೆಲೆಯಲ್ಲಿ ನಡೆದ ಮಹಾಮನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿರು.
ಅಕ್ಕನ ವಚನದಲ್ಲಿ ಕನ್ನಡ ಸಾಹಿತ್ಯದ ಮೌಲಿಕ ಬರವಣಿಗೆಗಳಿದ್ದು, ಸರ್ವಜನರಿಗೂ ಮಾರ್ಗದರ್ಶಿಯಾಗಿವೆ. ಅಕ್ಕ ಮಹಾದೇವಿ ರಚಿಸಿದ ಅನೇಕ ವಚನಗಳಲ್ಲಿ ಲೋಕಾನುಭವ, ಜ್ಞಾನ ಸಂಪತ್ತು ಹಾಗೂ ಅಭಿವ್ಯಕ್ತಿತ್ವತೆ ಕಂಡು ಬರುತ್ತದೆ ಎಂದು ತಿಳಿಸಿದರು.
ದಾಸೋಹಿ ವೆಂಕಟೇಶ ಚಿತ್ರನಾಳ, ಮಹಾಂತೇಶ ಚಿತ್ತರನಾಳ ಇವರಿಗೆ ಬಸವಣ್ಣನವರ ಭಾವಚಿತ್ರ ಮತ್ತು ವಚನ ವಿಶ್ಲೇಷಣೆಯ ಪುಸ್ತಕವನ್ನು ಕುಮ್ಮಣ್ಣ ದೇಶಮುಖ ವಿತರಿಸಿದರು.
ಪ್ರೊ. ಎಸ್.ಎನ್. ಕಂಗಳ, ನೀಲಕಂಠರಾವ ದೇಶಮುಖ, ಅಮರೇಶ ಹೊಸಮನಿ ಗಂಗನಗೌಡ್ರ, ಬಸಣ್ಣ ಹಳ್ಳಿ, ಶಿವಪುತ್ರಪ್ಪ ತಾಳಿಕೋಟಿ, ಪಟ್ಟಣ ಪಂಚಾಯಿತಿ ಸದಸ್ಯ ಸಂಗಣ್ಣ ಬಾರಡ್ಡಿ ಇತರರಿದ್ದರು.