ಮನುಕುಲಕ್ಕೆ ಅಕ್ಕಮಹಾದೇವಿ ಮಾದರಿ

Akkamahadevi is a role model for mankind
ನಾಲತವಾಡದಲ್ಲಿ ನಡೆದ ಮಹಾಮನೆ ಕಾರ್ಯಕ್ರಮದಲ್ಲಿ ಕುಮ್ಮಣ್ಣ ದೇಶಮುಖ ಅವರು ದಾಸೋಹಿ ವೆಂಕಟೇಶ ಚಿತ್ತರನಾಳ ಅವರಿಗೆ ಬಸವಣ್ಣನ ಭಾವಚಿತ್ರ ನೀಡಿದರು.
Published on

ನಾಲತವಾಡ: ಅಕ್ಕಮಹಾದೇವಿ ಕೇವಲ ಮಹಿಳೆಯರಿಗೆ ಮಾತ್ರವಲ್ಲದೆ ಇಡೀ ಮಾನವ ಕುಲಕ್ಕೆ ಮಾದರಿಯಾಗಿದ್ದಾರೆ ಎಂದು ಶರಣ ಸಾಹಿತಿ ಬಸವರಾಜ ಪೂಜಾರಿ ಹೇಳಿದರು.

ನಾಲತವಾಡ ಬಸವ ಕೇಂದ್ರದ ಸಹಯೋಗದೊಂದಿಗೆ ರಡ್ಡೇರ ಪೇಟೆಯ ನರಸಪ್ಪಗೌಡ ಚಿತ್ತರನಾಳ ಅವರ ಮನೆಯಲ್ಲಿ ಸೋಮವಾರ ಸಂಜೆ ಅಕ್ಕಮಹಾದೇವಿ ಜಯಂತಿ ಹಿನ್ನೆಲೆಯಲ್ಲಿ ನಡೆದ ಮಹಾಮನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಕ್ಕನ ವಚನದಲ್ಲಿ ಕನ್ನಡ ಸಾಹಿತ್ಯದ ಮೌಲಿಕ ಬರವಣಿಗೆಗಳಿದ್ದು, ಸರ್ವ ಜನರಿಗೂ ಮಾರ್ಗದರ್ಶಿಯಾಗಿವೆ. ಅಕ್ಕ ಮಹಾದೇವಿ ರಚಿಸಿದ ಅನೇಕ ವಚನಗಳಲ್ಲಿ ಲೋಕಾನುಭವ, ಜ್ಞಾನ ಸಂಪತ್ತು ಹಾಗೂ ಅಭಿವ್ಯಕ್ತಿ ಕಂಡು ಬರುತ್ತದೆ ಎಂದು ತಿಳಿಸಿದರು.

ದಾಸೋಹಿ ವೆಂಕಟೇಶ ಚಿತ್ತರನಾಳ, ಮಹಾಂತೇಶ ಚಿತ್ತರನಾಳ ಅವರಿಗೆ ಬಸವಣ್ಣನವರ ಭಾವಚಿತ್ರ ಮತ್ತು ವಚನ ವಿಶ್ಲೇಷಣೆಯ ಪುಸ್ತಕವನ್ನು ಕುಮ್ಮಣ್ಣ ದೇಶಮುಖ ವಿತರಿಸಿದರು.

ಪ್ರೊ. ಎಸ್.ಎನ್. ಕಂಗಳ, ನೀಲಕಂಠರಾವ ದೇಶಮುಖ, ಅಮರೇಶ ಹೊಸಮನಿ ಗಂಗನಗೌಡ್ರ, ಬಸಣ್ಣ ಹಳ್ಳಿ, ಶಿವಪುತ್ರಪ್ಪ ತಾಳಿಕೋಟಿ, ಪಟ್ಟಣ ಪಂಚಾಯಿತಿ ಸದಸ್ಯ ಸಂಗಣ್ಣ ಬಾರಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net